ಬೆಂಗಳೂರು, ಎ.21 (DaijiworldNews/PY): ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಕರೊನದಿಂದ ಕಿಂಚಿತ್ತೂ ಪಾಠ ಕಲಿಯದ ಬಿಜೆಪಿ ಸರ್ಕಾರಕ್ಕೆ ತಜ್ಞರ ಸಲಹೆಗಳು "ಗೋರ್ಕಲ್ಲ ಮೇಲೆ ಮಳೆ ಸುರಿದಂತೆ" ಅಷ್ಟೇ ಎಂದು ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕರೊನದಿಂದ ಕಿಂಚಿತ್ತೂ ಪಾಠ ಕಲಿಯದ ಬಿಜೆಪಿ ಸರ್ಕಾರಕ್ಕೆ ತಜ್ಞರ ಸಲಹೆಗಳು "ಗೋರ್ಕಲ್ಲ ಮೇಲೆ ಮಳೆ ಸುರಿದಂತೆ" ಅಷ್ಟೇ. ಟೆಸ್ಟಿಂಗ್ನಲ್ಲೂ ಫೇಲ್, ಟ್ರಾಕಿಂಗ್ನಲ್ಲೂ ಫೆಲ್, ಟ್ರೀಟಿಂಗ್ನಲ್ಲೂ ಫೆಲ್ ಬೌದ್ಧಿಕವಾಗಿ ದಿವಾಳಿಯಾದ ಈ ಸೋಂಕಿತಸರ್ಕಾರ ಕ್ಕೆ ಕರೋನಾ ನಿರ್ವಹಿಸುವ ಕನಿಷ್ಠ ಇಚ್ಚಾಶಕ್ತಿಯೂ ಇಲ್ಲ. ಕಾರ್ಯಸೂಚಿಯೂ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ, ವೈದ್ಯಕೀಯ ವ್ಯವಸ್ಥೆ ಹಾಗೂ ಸೋಂಕು ನಿಯಂತ್ರಣದ ಬಗ್ಗೆ ಕೇವಲ ಬೆಂಗಳೂರು ಕೇಂದ್ರಿತವಾಗಿ ಮಾತ್ರ ಚಿಂತಿಸದೆ ರಾಜ್ಯಾದ್ಯಂತ ಜಿಲ್ಲೆ, ತಾಲೂಕುಗಳನ್ನೂ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವುದು ಅಗತ್ಯ. ಜಿಲ್ಲಾ ಕೇಂದ್ರಗಳಲ್ಲಿಯೂ ಕನಿಷ್ಠ ವೈದ್ಯಕೀಯ ಸೌಲಭ್ಯಗಳು ಇಲ್ಲದೆ ಜನ ಪರದಾಡುತ್ತಿದ್ದಾರೆ" ಎಂದು ಕೆಂಡಕಾರಿಸಡ.
"ಕರೋನಾ ಸೋಂಕಿಗೆ ಜನರನ್ನೇ ಹೊಣೆ ಮಾಡಿ ಮಾತಾಡಿದ ಸಚಿವ ಸುಧಾಕರ್ ಅವರೇ, ಜನ ಮಾಸ್ಕ್ ಹಾಕಿಕೊಳ್ಳುವುದನ್ನು, ಸ್ಯಾನಿಟೈಸರ್ ಉಪಯೋಗಿಸುವುದನ್ನು ಕಲಿತು ಒಂದು ವರ್ಷವಾಯ್ತು. ಆ 1 ವರ್ಷದಲ್ಲಿ ನಿಮ್ಮ ಸರ್ಕಾರ ಕಲಿತಿದ್ದೇನು,ಮಾಡಿದ್ದೇನು?. ಗಂಭೀರ್ಯತೆ ಇಲ್ಲದ ನಿಮ್ಮ ಸರ್ಕಾರವೇ ಸೋಂಕಿತಸರ್ಕಾರ ಆಗಿರುವುದರಿಂದ, ಸೋಂಕು ಮತ್ತೊಮ್ಮೆ ಉಲ್ಬಣಿಸಿದೆ" ಎಂದು ಕಿಡಿಕಾರಿದೆ.