ಬೆಂಗಳೂರು, ಏ. 20 (DaijiworldNews/SM): ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಹಿನ್ನೆಲೆ ಏಪ್ರಿಲ್ 20ರ ಬುಧವಾರದಿಂದಲೇ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹಾಗೂ ಶನಿವಾರ ಹಾಗೂ ರವಿವಾರ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ನಾಳೆಯಿಂದ ಏನೇನು ಇರುತ್ತೇ? ಏನೇನು ಇರಲ್ಲ?
ವೀಕೆಂಡ್ ಕರ್ಫ್ಯೂ ಸಂದರ್ಭ ಸಂಪೂರ್ಣ ಚಟುವಟಿಕೆಗಳು ಬಂದ್
ಕೇವಲ ಅಗತ್ಯ ವಸ್ತುಗಳು, ಹೋಟೇಲ್ ಗಳು ಬೆಳಿಗ್ಗೆ 11ರ ತನಕ ಓಪನ್
ವೀಕ್ ಡೇ ಗಳಲ್ಲಿ ರಾತ್ರಿ 9ರ ತನಕ ಜನರ ಓಡಾಟಕ್ಕೆ ಅವಕಾಶ
ಫುಡ್ ಸ್ಟ್ರೀಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ
ಜಿಮ್, ಸ್ವಿಮ್ಮಿಂಗ್ ಫೂಲ್ ಗಳು ಸಂಪೂರ್ಣ ಬಂದ್
ಶಾಲಾ ಕಾಲೇಜುಗಳು ಸಂಪೂರ್ಣ ಬಂದ್
ಓನ್ ಲೈನ್ ತರಗತಿಗಳಿಗೆ ಅವಕಾಶ
ಧಾರ್ಮಿಕ ಕೇಂದ್ರಗಳು ಬಂದ್, ಕೇವಲ ಅರ್ಚಕರಿಗೆ ಅವಕಾಶ
ಮಂದಿರ, ಮಸೀದಿ, ಚರ್ಚ್ ಗಳಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲ
ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ
ಹೋಟೆಲ್ ಗಳಲ್ಲೂ ಕೂಡ ಪಾರ್ಸೆಲ್ ಗಳಿಗೆ ಮಾತ್ರ ಅವಕಾಶ
ಬಸ್ ಗಳಲ್ಲಿ ಶೇ. 50ರಷ್ಟು ಪ್ರಯಾಣಿಕರಿಗೆ ಅವಕಾಶ
ಅಡೀಟೋರಿಯಂ, ಸಿನಿಮಾ ಹಾಲ್ ಗಳು ಸಂಪೂರ್ಣ ಬಂದ್
ಸಲೂನ್, ಬ್ಯೂಟಿಪಾರ್ಲರ್ ಓಪನ್
ಮದುವೆ ಸಮಾರಂಭಗಳಿಗೆ 50 ಜನರಿಗೆ ಮಾತ್ರ ಅವಕಾಶ
ಅಂತಿಮ ಸಂಸ್ಕಾರಕ್ಕೆ 20 ಜನರ ಮಿತಿ
ಮನಾರಂಜನಾ ಪಾರ್ಕ್ ಗಳು ಸಂಪೂರ್ಣ ಬಂದ್