ನವದೆಹಲಿ, ಏ. 20 (DaijiworldNews/HR): ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಮತ್ತೊಂದೆಡೆ ಏ.11 ರವರೆಗೂ ರಾಜ್ಯಗಳಿಂದ ಶೇ.23 ರಷ್ಟು ಲಸಿಕೆ ಪೋಲಾಗಿದೆ ಎಂಬ ಮಾಹಿತಿ ಆರ್ಟಿಐನಿಂದ ಲಭ್ಯವಾಗಿದೆ.
ಸಾಂಧರ್ಭಿಕ ಚಿತ್ರ
ವರದಿಯ ಪ್ರಕಾರ, 10.34 ಕೋಟಿ ಡೋಸ್ ಲಸಿಕೆಗಳಲ್ಲಿ ಒಟ್ಟಾರೆ 44.28 ಲಕ್ಷ ಲಸಿಕೆ ಡೋಸ್ ಗಳು ಏ.11 ರವರೆಗೂ ವಿವಿಧ ರಾಜ್ಯಗಳಲ್ಲಿ ಪೋಲಾಗಿದೆ.
ಇನ್ನು ತಮಿಳುನಾಡಿನಲ್ಲಿ ಅತೀ ಹೆಚ್ಚು ಪೋಲಾಗಿದೆ ಎಂದು ವರದಿಯಾಗಿದ್ದು, ಹರಿಯಾಣದಲ್ಲಿ(9.74%), ಪಂಜಾಬ್(8.12%), ಮಣಿಪುರ(7.8%), ತೆಲ ಗಾಣ(7.55%) ಪೋಲಾಗಿದೆ ಎನ್ನಲಾಗಿದೆ.
ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಮ್, ಗೋವಾ, ದಾಮನ್, ಡಿಯು, ಅಂಡಮಾನ್ ನಿಕೋಬಾರ್ ದ್ವೀಪ, ಲಕ್ಷದ್ವೀಪಗಳಲ್ಲಿ ಶೂನ್ಯ ಪ್ರಮಾಣದಲ್ಲಿ ಲಸಿಕೆ ಪೋಲಾಗಿದೆ ಎಂದು ವರದಿಯಾಗಿದೆ.
ಇನ್ನು ಭಾರತ ಈ ವರೆಗೂ 12.69 ಕೋಟಿ ಕೊರೊನಾ ಲಸಿಕೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿದೆ.