ನವದೆಹಲಿ, ಏ. 20 (DaijiworldNews/HR): ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 6 ಗಂಟೆಗೆ ಲಸಿಕೆ ಉತ್ಪಾದಕ ಕಂಪನಿಗಳೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ.
ಪ್ರಧಾನಿ ಮೋಯವರು ಇದಕ್ಕೂ ಮೊದಲು ದೇಶದ ವಿವಿದೆಢೆ ಇರುವ ವೈದ್ಯರು, ಲಸಿಕೆ ಉತ್ಪಾದಕ ಕಂಪನಿಗಳೊಂದಿಗೆ ಎರಡು ಬಾರಿ ಸಭೆ ನಡೆಸಿದ್ದರು.
ಇನ್ನು ದೇಶದಲ್ಲಿ ಸತತ ಆರನೇ ದಿನವೂ ಸತತ 2 ಲಕ್ಷಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 2.59 ಲಕ್ಷ ಪ್ರಕರಣಗಳು ವರದಿಯಾಗಿದ್ದು, 1,761 ಸೋಂಕಿತರು ಮೃತಪಟ್ಟಿದ್ದಾರೆ.