ಶಿವಮೊಗ್ಗ, ಏ 20(DaijiworldNews/MS): "ಸಿದ್ರಾಮಯ್ಯರಿಗೆ ನಾನು ಜೀವಂತ ಇದೀನಿ ಅಂತಾ ತೋರ್ಸಿಕೊಳ್ಳೋಕೆ ಹೇಳಿಕೆ ನೀಡ್ತಾರೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, "ಸಿಎಂ ಆಸ್ಪತ್ರೆಯಲ್ಲಿ , ಸರ್ಕಾರ ಐಸಿಯು" ನಲ್ಲಿ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ವಿಪಕ್ಷಗಳು ಇರುವುದೇ ಟೀಕೆ ಮಾಡುವುದಕ್ಕಾಗಿ ,ಅವರ ಟೀಕೆಗಳನ್ನು ನಾವು ಸ್ವಾಗತ ಮಾಡುತ್ತೇವೆ. ಟೀಕೆ ಸರಿಯಿದ್ದರೆ ನಾವು ತಿದ್ದಿಕೊಳ್ಳುತ್ತೇವೆ. ಇನ್ನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದವರು ರಾಜ್ಯ ಸರ್ಕಾರಕ್ಕೆ ಕೊರೊನಾ ನಿಯಂತ್ರಿಸುವ ಸಲುವಾಗಿ ಸಲಹೆ ಕೊಡುತ್ತಾರೆ. ಆದರೆ ಸಿದ್ದರಾಮಯ್ಯ ಅಂತಹ ವ್ಯಕ್ತಿ ಮಾತ್ರ ರಸ್ತೆಯಲ್ಲಿ ಹೋಗೋವ ಕುಡುಕ ತರ ಮಾಡುತ್ತಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಸಿದ್ದರಾಮಯ್ಯ ಅವರ ತಲೆಕೆಟ್ಟು ಹನ್ನೆರಡಾಣೆ ಆಗಿದೆ. ವಿಪಕ್ಷ ನಾಯಕನಾಗಿ ಇವತ್ತಿನವರೆಗೂ ಏನಾದರೂ ಹೇಳಿಕೆ ಕೊಟ್ಟು ನಾನು ಜೀವಂತ ಇದ್ದೀನಿ ಎಂದು ತೋರಿಸಿಕೊಳ್ಳಲು ಕುಡುಕನಂತೆ ಹೇಳಿಕೆ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರನ್ನು ಜನರಾಗಲಿ, ಚಾಮುಂಡೇಶ್ವರಿಯಾಗಲಿ ಕೈ ಹಿಡಿಯಲಿಲ್ಲ, ಮುಖ್ಯಮಂತ್ರಿ ಬಿಡಿ, ಅವರು ವಿಪಕ್ಷ ನಾಯಕನಾಗಲು ಆಯೋಗ್ಯ ವ್ಯಕ್ತಿ ಎಂದು ಕಿಡಿಕಾರಿದರು.