ಶಿವಮೊಗ್ಗ, ಏ. 20 (DaijiworldNews/HR): ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಪಾಲರು ನೇರವಾಗಿ ಬಂದಿರುವುದು ಆಶ್ಚರ್ಯವಾಗಿದೆ. ಚುನಾಯಿತ ಪ್ರತಿನಿಧಿಗಳ ಸರ್ಕಾರ ಇರುವ ಸಂದರ್ಭದಲ್ಲಿ ಅವರು ಸಭೆ ಯಾವುದಕ್ಕೆ ಕರೆದಿದ್ದಾರೋ ಅರ್ಥವಾಗುತ್ತಿಲ್ಲಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, "ಕೊರೊನಾ ನಿಯಂತ್ರಣದ ವಿಚಾರದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ವಿಪಕ್ಷ ನಾಯಕರು ಸೇರಿದಂತೆ ಹಲವರನ್ನು ಸಭೆಗೆ ಕರೆದಿದ್ದಾರೆ. ಇದು ಒಳ್ಳೆಯ ವಿಚಾರ. ನಾನು ರಾಜ್ಯಪಾಲರು ಸಭೆ ಕರಿಯಬಾರದು ಎಂದು ಹೇಳುತ್ತಿಲ್ಲ. ಆದರೆ ಇದು ರಾಜ್ಯದಲ್ಲಿ ಒಂದು ಹೊಸ ವ್ಯವಸ್ಥೆವೊಂದರ ಹುಟ್ಟಿಗೆ ಕಾರಣವಾಗಯತ್ತದೆ ಎಂದು ನನ್ನಗೊಂದು ಅನುಮಾನ ಉಂಟಾಗಿದೆ" ಎಂದಿದ್ದಾರೆ.
"ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಪಾಲರು ಸಭೆ ಕರೆದಿರಬಹುದು. ಚುನಾಯಿತ ಪ್ರತಿನಿಧಿಗಳು ಜಾಗೃತಿ ಅಗಬೇಕು ಅನ್ನುವ ಉದ್ದೇಶದಿಂದ ಕರೆದಿರಬಹುದು. ಅವರು ಏನೇ ಮಹತ್ವದ ತೀರ್ಮಾನ ಕೈಗೊಂಡರೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ" ಎಂದರು.
ಇನ್ನು ಲಾಕ್ ಡೌನ್ ಕುರಿತು ಮಾತಾನಾಡಿದ ಅವರು, "ಕರ್ನಾಟಕದಲ್ಲಿ ಲಾಕ್ ಡೌನ್ ಅವಶ್ಯಕತೆಯಿಲ್ಲ. ಇದರಲ್ಲಿ ಯಾವುದೇ ಅನುಮಾನವಿಲ್ಲ.ಆದ್ರೂ, ರಾಜ್ಯಪಾಲರು ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುತ್ತೇವೆ" ಎಂದು ಹೇಳಿದ್ದಾರೆ.