ನವದೆಹಲಿ, ಏ.20 (DaijiworldNews/MB) : ಕೊರೊನಾ ಹಿನ್ನೆಲೆಯಲ್ಲಿ ಐಸಿಎಸ್ಇ ಯ 10 ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿದೆ.
ಪ್ರಸ್ತುತ ಕೊರೊನಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಿಐಎಸ್ಸಿಇ (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಏಕ್ಸಾಮಿನೇಷನ್) ಐಸಿಎಸ್ಇ ೧೦ ನೇ ತರಗತಿಯ ಪರೀಕ್ಷೆಯನ್ನು ರದ್ದುಪಡಿಸಿದ್ದು 11 ನೇ ತರಗತಿಗೆ ದಾಖಲಾತಿಯನ್ನು ಆರಂಭಿಸಲಾಗುತ್ತದೆ ಎಂದು ಸಿಐಎಸ್ಸಿಇ ತಿಳಿಸಿದೆ. ಹಾಗೆಯೇ ಶಾಲೆಗಳು ಆನ್ಲೈನ್ ತರಗತಿಗೆ ಸಿದ್ದತೆ ನಡೆಸಲೂ ತಿಳಿಸಿದೆ.
ಇನ್ನು ಐಎಸ್ಸಿ 12 ನೇ ತರಗತಿಯ ಪರೀಕ್ಷೆಗಳ ನಡೆಯಲಿದ್ದು ಇದರ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಕೂಡಾ ಸಿಐಎಸ್ಸಿಇ ತಿಳಿಸಿದೆ.
ಇನ್ನು ಐಸಿಎಸ್ಇ 10 ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶವನ್ನು ಯಾವುದೇ ಪಕ್ಷಪಾತವಿಲ್ಲದೆ ನೀಡಲಾಗುತ್ತದೆ. ಫಲಿತಾಂಶ ದಿನಾಂಕವನ್ನು ಘೋಷಿಸಲಾಗುವುದು ಎಂದೂ ತಿಳಿಸಿದೆ.
ಕೆಲ ದಿನಗಳ ಹಿಂದೆ ಐಸಿಎಸ್ಇ 10 ನೇ ತರಗತಿ ಹಾಗೂ ಐಎಸ್ಸಿ 12 ನೇ ತರಗತಿ ಪರೀಕ್ಷೆಯನ್ನು ಮುಂದೂಡಿ ಸಿಐಎಸ್ಸಿಇ ಆದೇಶ ಹೊರಡಿಸಿತ್ತು.