ನವದೆಹಲಿ, ಏ.20 (DaijiworldNews/MB) : ಸೋಮವಾರ ಒಂದೇ ದಿನದಲ್ಲಿ ಭಾರತದಲ್ಲಿ 73,600 ಕೊರೊನಾ ಲಸಿಕಾ ಕೇಂದ್ರ ತೆರೆಯುವ ಮೂಲಕ ಭಾರತದಲ್ಲಿ ಕೊರೊನಾ ವಾಕ್ಸಿನೇಷನ್ ಕೇಂದ್ರಗಳ ಸಂಖ್ಯೆ ಈ ಹಿಂದೆ ಇದ್ದ ಕೇಂದ್ರಗಳಿಗಿಂತಲೂ ಎರಡು ಪಟ್ಟಿಗೂ ಅಧಿಕವಾಗಿದೆ.
ಭಾರತದಲ್ಲಿ ಒಂದು ದಿನ ದೇಶಾದ್ಯಂತ ಸರಾಸರಿ 45,000 ಸಕ್ರಿಯ ಕೇಂದ್ರಗಳಿಗಿಂತ 28,600 ಅಧಿಕವಾಗಿದೆ. ಸೋಮವಾರ ರಾತ್ರಿ 8 ಗಂಟೆಯವರೆಗೆ ದೇಶದಲ್ಲಿ 31 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ವಾಕ್ಸಿನೇಷನ್ ಮಾಡಲಾಗಿದೆ. ಸುಮಾರು 21.7 ಲಕ್ಷ ಮಂದಿ ಮೊದಲ ಡೋಸ್ ಹಾಗೂ 9.3 ಲಕ್ಷ ಮಂದಿ ಎರಡನೇ ಡೋಸ್ ಪಡೆದಿದ್ದಾರೆ.
ಇನ್ನು ಸೋಮವಾರ ಲಸಿಕೆ ಪಡೆಯಲು ಅರ್ಹರಾದವರಿಗೆ ಕೆಲಸದ ಸ್ಥಳಗಳಲ್ಲೇ ಲಸಿಕೆ ನೀಡಲಾಗಿದೆ. ಈ ಹಿನ್ನೆಲೆ ಈ ಲಸಿಕೆ ಹೆಚ್ಚು ಫಲಾನುಭವಿಗಳಿಗೆ ನೀಡಲು ಸಾಧ್ಯವಾಗಿದೆ.
ಲಸಿಕಾ ಅಭಿಯಾನವನ್ನು ಜನವರಿ 16 ರಂದು ಪ್ರಾರಂಭ ಮಾಡಲಾಗಿದ್ದು ಈವರೆಗೆ ಒಟ್ಟು 12.69 ಕೋಟಿಗಿಂತ ಅಧಿಕ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.
ಏತನ್ಮಧ್ಯೆ ದೇಶದಲ್ಲಿ ಆಮ್ಲಜನಕ ಬೆಂಬಲಿತ ಹಾಸಿಗೆಗಳು ಮತ್ತು ತೀವ್ರ ನಿಗಾ ಘಟಕ (ಐಸಿಯು)-ವೆಂಟಿಲೇಟರ್ ಹಾಸಿಗೆಗಳ ಕೊರತೆ ಕಾಣಿಸಿಕೊಂಡಿದ್ದು ದೇಶಾದ್ಯಂತದ ಎಲ್ಲ ಅಖಿಲ ಭಾರತ ವೈದ್ಯಕೀಯ ವಿಜ್ಞಾನ (ಏಮ್ಸ್) ಆಸ್ಪತ್ರೆಗಳಲ್ಲಿ ಆಮ್ಲಜನಕ ಬೆಂಬಲಿತ ಹಾಸಿಗೆಗಳು ಮತ್ತು ತೀವ್ರ ನಿಗಾ ಘಟಕ (ಐಸಿಯು)-ವೆಂಟಿಲೇಟರ್ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಸೂಚಿಸಿದೆ.