ನವದೆಹಲಿ, ಏ. 19 (DaijiworldNews/HR): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೋನಾ ಸೋಂಕಿನ ನಿಯಂತ್ರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೊರೊನಾ ನಿಯಂತ್ರಣದ ಬಗ್ಗೆ ಕಠಿಣ ನಿಯಮ ಜಾರಿಗೊಳಿಸೋ ಬಗ್ಗೆ ಚರ್ಚಿಸಿದ್ದರು.
ಇನ್ನು ಪತ್ರದಲ್ಲಿ ಕೊರೊನಾ ವಿರುದ್ಧ ಹೋರಾಡಲು ಐದು ಕ್ರಮಗಳನ್ನು ಸೂಚಿಸಿದ್ದರು, ಇದರಲ್ಲಿ ಲಸಿಕೆಯನ್ನು ಹೆಚ್ಚಿಸುವುದು ಮತ್ತು ಔಷಧಿಗಳ ಪೂರೈಕೆಯನ್ನು ಹೆಚ್ಚಿಸುವುದು ಸೇರಿತ್ತು ಎನ್ನಲಾಗಿದೆ.