ನವದೆಹಲಿ, ಏ 19 (DaijiworldNews/MS): ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ , ಮಂಗಳವಾರದಿಂದ ಮೇ 3 ರವರೆಗೆ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನಗಳನ್ನು ಹಾಂಗ್ ಕಾಂಗ್ ಸ್ಥಗಿತಗೊಳಿಸಿದೆ. ಭಾರತ ಮಾತ್ರವಲ್ಲದೆ ಪಾಕಿಸ್ತಾನ ಮತ್ತು ಫಿಲಿಪೈನ್ಸ್ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳಿಗೂ ಈ ನಿಯಮ ಅನ್ವಯಿಸಲಿದೆ.
ಈ ತಿಂಗಳಿನಲ್ಲಿ ಎರಡು ವಿಸ್ಟಾರಾ ವಿಮಾನಗಳ ಸುಮಾರು 50 ಪ್ರಯಾಣಿಕರಲ್ಲಿ ಕೊವೀಡ್ ಸೋಂಕು ಕಂಡುಬಂದ ನಂತರ ಹಾಂಕಾಂಗ್ ಸರ್ಕಾರ ನಿರ್ಬಂಧ ಹೇರಿದೆ. ಹೊಸ ನಿಯಮಗಳ ಪ್ರಕಾರ, ಮೇಲೆ ತಿಳಿಸಿದ ದೇಶಗಳನ್ನು ಹೊರತುಪಡಿಸಿ ಹಾಂಗ್ ಕಾಂಗ್ಗೆ ಬರಲು ಬಯಸುವ ಇತರ ದೇಶದ ಎಲ್ಲಾ ಪ್ರಯಾಣಿಕರು ಪ್ರಯಾಣಕ್ಕೆ 72 ಗಂಟೆಗಳ ಮೊದಲು ಮಾಡಿದ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಎಂದು ಆದೇಶ ನೀಡಿದೆ.
ಮುಂಬೈ-ಹಾಂಗ್ ಕಾಂಗ್ ಮಾರ್ಗದಲ್ಲಿ ಮೇ 2 ರವರೆಗೆ ಎಲ್ಲಾ ವಿಸ್ಟಾರಾ ವಿಮಾನಗಳನ್ನು ಸ್ಥಗಿತಗೊಳಿಸುವುದಾಗಿ ಹಾಂಗ್ ಕಾಂಗ್ ಸರ್ಕಾರ ಭಾನುವಾರ ಪ್ರಕಟಿಸಿದೆ.
ವಿಸ್ಟಾರಾದ ಮುಂಬೈ-ಹಾಂಗ್ ಕಾಂಗ್ ವಿಮಾನದಲ್ಲಿ ಭಾನುವಾರ ಮೂವರು ಪ್ರಯಾಣಿಕರು ಕೊವೀಡ್ -೧೯ ಸೋಂಕು ಪೀಡಿತರಾದ್ದರಿಂದ ನಡೆಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.