ನವದೆಹಲಿ, ಏ. 18 (DaijiworldNews/HR): ಕೊರೊನಾ ಪರಿಸ್ಥಿತಿ ದೇಶದಲ್ಲಿ ಹದಗೆಡುತ್ತಿರುವುದರ ನಡುವೆಯೂ ಪ್ರಧಾನಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮೋದಿ ಪ್ರಧಾನಿಯಾಗಿ ಅಲ್ಲ, ಪಕ್ಷದ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ' ಎಂದು ಸಿಪಿಎಂ ಪಕ್ಷದ ಪ್ರದಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸೀತಾರಾಂ, "ಮೋದಿ ಪ್ರಧಾನಿ ಸ್ಥಾನಕ್ಕಿಂತಲೂ ಪ್ರಚಾರಕರ್ತನಾಗಿದ್ದಾರೆ. ಅದಕ್ಕಾಗಿಯೇ ಅವರಿಗೆ ಚುನಾವಣಾ ಪ್ರಚಾರ ಮುಖ್ಯವಾಗಿದೆ. ಸಮಯ ಉಳಿದರೆ ಟಿ.ವಿಗಳಿಗೆ, ಸುದ್ದಿ ಶೀರ್ಷಿಕೆಗಳಿಗೆ ನೆರವಾಗುವಂತೆ ಏನಾದರೂ ಪರಿಪೂರ್ಣವಾಗಿ ಮಾಡುತ್ತಾರೆ. ಇದೊಂದು ಅಸಹಾಯಕ ಸ್ಥಿತಿ" ಎಂದರು.
ಇನ್ನು ಸೋಂಕು ಸ್ಥಿತಿ ಹಿನ್ನೆಲೆಯಲ್ಲಿ ತಮ್ಮ ಪಕ್ಷ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದ ಸಭೆ ನಡೆಸುವುದಿಲ್ಲ ಎಂದು ಹೇಳಿತ್ತು. ಕಾಂಗ್ರೆಸ್ ಕೂಡಾ ಇದೇ ನಿಲುವು ತಳೆದಿದೆ. ಆದರೆ, ಗೃಹ ಮಂತ್ರಿಯೂ ಆಗಿರುವ ಬಿಜೆಪಿ ನಾಯಕ ಅವೈಜ್ಞಾನಿಕವಾಗಿ ವರ್ತಿಸುತ್ತಿದ್ದು, ಜನರ ಜೀವಕ್ಕಿಂತಲೂ ಅವರ ಪ್ರಚಾರ ಸಭೆಯೇ ದೊಡ್ಡದೇ? ಎಂದು ಪ್ರಶ್ನಿಸಿದ್ದಾರೆ.