ವಾರಣಾಸಿ, ಎ.18 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್ 18ರ ರವಿವಾರ ಉತ್ತರಪ್ರದೇಶದ ವಾರಣಾಸಿಯ ಲೋಕಸಭಾ ಕ್ಷೇತ್ರದಲ್ಲಿ ಕೊರೊನಾ ಪರಿಸ್ಥಿತಿಯನ್ನು ಅವಲೋಕಿಸಲು ಸಭೆ ನಡೆಸಿದರು.
ವರ್ಚುವಲ್ ಮೀಟ್ನಲ್ಲಿ ಮಾತನಾಡಿದ ಅವರು, "ಕೊರೊನಾದ ಎರಡನೇ ಅಲೆಯ ನಿಯಂತ್ರಣಕ್ಕೆ ಟೆಸ್ಟ್, ಟ್ರ್ಯಾಕ್ ಹಾಗೂ ಟ್ರೀಟ್ ಏಕೈಕ ಮಾರ್ಗವಾಗಿದೆ. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಹೇಳಿದ್ದಾರೆ.
ಬಳಿಕ ಅಧಿಕಾರಿಗಳು ವಾರಣಾಸಿಯ ಕೊರೊನಾ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದರು. ಅಲ್ಲದೇ, ಐಸೋಲೇಶನ್ ಸೆಂಟರ್ ಸೇರಿದಂತೆ ಬೆಡ್ ಲಭ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
"ದೇಶವು ಒಗ್ಗಟ್ಟಿನಿಂದ ಕಳೆದ ವರ್ಷ ಕೊರೊನಾವನ್ನು ಸೋಲಿಸುವಲ್ಲಿ ಸಫಲವಾಗಿತ್ತು. ದೇಶವು ಅದೇ ತತ್ವಗಳೊಂದಿಗೆ ಮತ್ತೆ ಕಾರ್ಯನಿರ್ವಹಿಸಬೇಕಿದೆ" ಎಂದು ತಿಳಿಸಿದ್ದಾರೆ.
"ಟೆಸ್ಟ್, ಟ್ರ್ಯಾಕ್ ಹಾಗೂ ಟ್ರೀಟ್ ಬದಲಿಗೆ ಯಾವುದೇ ವ್ಯವಸ್ಥೆ ಇಲ್ಲ. ಆರಂಭಿಕ ಪರೀಕ್ಷೆ, ಸರಿಯಾದ ಟ್ರ್ಯಾಕಿಂಗ್ ಮರಣ ಪ್ರಮಾಣವನ್ನು ಇಳಿಕೆ ಮಾಡವಲ್ಲಿ ಪ್ರಮುಖ ಪಾತ್ರವಹಿಸಲಿದೆ" ಎಂದು ಹೇಳಿದ್ದಾರೆ.