ಬೆಂಗಳೂರು, ಏ. 18 (DaijiworldNews/HR): "ಸರ್ಕಾರದಲ್ಲಾಗಲಿ ಅಥವಾ ಅಧಿಕಾರಿಗಳಲ್ಲಾಗಲಿ ಯಾವುದೇ ಸಮನ್ವಯತೆ ಇಲ್ಲ" ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಟೆಸ್ಟ್ ಗಳನ್ನು ಬೇಕಾಬಿಟ್ಟಿ ಮಾಡಲಾಗುತ್ತಿದ್ದು, ಕೆಲವೆಡೆ ಪಾಸಿಟಿವ್ ಬಂದರೆ, ಮತ್ತೆ ಕೆಲವೆಡೆ ನೆಗೆಟಿವ್ ಬರುತ್ತಿವೆ. ಯಾರೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ತಮ್ಮ ಸ್ವಾರ್ಥ, ಹಣದ ಆಸೆಗೆ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ" ಎಂದರು.
ಇನ್ನು "ರೆಮಿಡಿಸಿವಿರ್ ಸಂಗ್ರಹಕ್ಕೆ ಪ್ರಧಾನ ಮಂತ್ರಿ ಸೂಚಿಸಿದ್ದರೂ ಚುಚ್ಚುಮದ್ದು ಕೊರತೆಯಾಗಿದ್ದು, ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಡಿಕೆ ಸುರೇಶ್, "ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಕೊಡುತ್ತಿರುವ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಸೋಂಕಿತರ ಸಂಖ್ಯೆ ದ್ವಿಗುಣ ಗೊಳ್ಳುತ್ತಿದೆ ಆದರೂ ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.