ದಾವಣಗೆರೆ, ಏ.18 (DaijiworldNews/MB) : ರವಿವಾರ ಮಾಸ್ಕ್ ಅಭಿಯಾನ ನಡೆಸುತ್ತಿದ್ದ ವೇಳೆ ಮಾಸ್ಕ್ ಹಾಕದೆ ಅಧಿಕಾರಿಗೊಂದಿಗೆಯೇ ವಾಗ್ವಾದಕ್ಕೆ ಇಳಿದ ವ್ಯಾಪಾರಿಯೋರ್ವನಿಗೆ ಎಸ್ಪಿ ಹನುಮಂತರಾಯ ಕಪಾಳ ಮೋಕ್ಷ ಮಾಡಿದ್ದಾರೆ.
ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ನೇತೃತ್ವದಲ್ಲಿ ಮಾಸ್ಕ್ ಅಭಿಯಾನ ನಡೆಸಲಾಗುತ್ತಿತ್ತು.
ಈ ಸಂದರ್ಭ ಈ ವ್ಯಾಪಾರಿ ಮಾಸ್ಕ್ ಹಾಕದೆ ಇದ್ದುದ್ದು ಮಾತ್ರವಲ್ಲದೆ ದಂಡ ಕಟ್ಟಲು ಹೇಳಿದಾಗ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.
ಇದರಿಂದಾಗಿ ಗರಂ ಆದ ಎಸ್ಪಿ ಹನುಮಮಂತರಾಯ ಅವರು ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆದರೆ ಇಷ್ಟಾದರೂ ವ್ಯಾಪಾರಿ ಮಾತ್ರ ದಂಡಕಟ್ಟಲು ನಿರಾಕರಿಸಿದ್ದು ಕೊನೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.