ನವದೆಹಲಿ, ಎ.18 (DaijiworldNews/PY): "ಪಶ್ಚಿಮಬಂಗಾಳವನ್ನು ಬಿಜೆಪಿ ಸಾಮ್ರಾಜ್ಯಕ್ಕೆ ಸೇರಿಸುವ ತುರ್ತು ಯುದ್ದದ ನಡುವೆಯೂ ಕೊರೊನಾ ಪರಿಸ್ಥಿತಿಯನ್ನು ಪರಿಶೀಲನೆ ಮಾಡಲು ಬಿಡುವು ಮಾಡಿಕೊಂಡ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು" ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, "ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೀದಿ ಓ ದೀದಿ ಎಂದು ಕರೆದಿದ್ದರು, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ರಾಜ್ಯ ಮುಖ್ಯಮಂತ್ರಿಯೋರ್ವರನ್ನು ಈ ರೀತಿ ಕರೆಯುವುದು ಸೂಕ್ತವೇ?" ಎಂದು ಕೇಳಿದ್ದಾರೆ.
"ಹೆಚ್ಚಿನ ಆಸ್ಪತ್ರೆಗಳಲ್ಲಿ ಲಸಿಕೆ ಇಲ್ಲ ಎಂದು ಬೋರ್ಡ್ಗಳನ್ನು ಹಾಕಲಾಗಿದೆ. ಆದರೂ ಲಸಿಕೆಯ ಪೂರೈಕೆಯಲ್ಲಿ ಕೊರತೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳುತ್ತಿದ್ದಾರೆ. ಸಚಿವರ ಮಾತನ್ನು ನೀವು ನಂಬಿ. ನಮ್ಮ ದೇಶದಲ್ಲಿ ಲಸಿಕೆ, ಆಮ್ಲಜನಕ, ರೆಮ್ಡಿಸ್ವಿರ್, ಆಸ್ಪತ್ರೆ ಹಾಸಿಗೆಗಳು, ವೈದ್ಯರುಹಾಗೂ ನರ್ಸ್ಗಳ ಕೊರತೆಯಿಲ್ಲ. ಬದಲಾಗಿ ರೋಗಿಗಳ ಕೊರತೆ ಮಾತ್ರ ಇದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.