ಪುರ್ಬಸ್ತಾಲಿ, ಎ.18 (DaijiworldNews/PY): "ಪಶ್ಚಿಮ ಬಂಗಾಳದಲ್ಲಿ ಐದು ಹಂತಗಳಲ್ಲಿ ಚುನಾವಣೆಯಾದ 180 ಸ್ಥಾನಗಳ ಪೈಕಿ 122 ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ತಿಳಿಸಿದ್ದಾರೆ.
ಪುರ್ಬಾ ಬರ್ಧಮನ್ ಜಿಲ್ಲೆಯಲ್ಲಿ ನಡೆದ ರ್ಯಾಕಿಯನ್ನುದ್ದೇಶಿಸಿ ಮಾತನಾಡಿದ ಅವರು, "ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಬಿಜೆಪಿಗೆ ನಂದಿಗ್ರಾಮ್ ಸ್ಥಾನವನ್ನು ಬಿಟ್ಟುಕೊಟ್ಟ ಬಳಿಕ ಹೊರ ಹೋಗಬೇಕಾಗುತ್ತದೆ" ಎಂದು ಟೀಕಿಸಿದ್ದಾರೆ.
"ದೀದಿ ಐದು ಹಂತದ ಚುನಾವಣೆಗಳ ಬಳಿಕ ನಿರಾಶೆಗೊಂಡಂತೆ ಕಾಣುತ್ತದೆ. ಏಕೆಂದರೆ, 122 ಕ್ಕೂ ಅಧಿಕ ಸ್ಥಾನಗಳನ್ನು ಹೊಂದಲಿರುವ ಬಿಜೆಪಿ ತನಗಿಂತ ಹೆಚ್ಚು ಮುಂದಿದೆ ಎನ್ನುವ ಕಾರಣಕ್ಕೆ" ಎಂದಿದ್ದಾರೆ.
"ದೀದಿ, ಇದನ್ನು ನನ್ನಿಂದ ತೆಗೆದುಕೊಳ್ಳಿ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ನಂದಿಗ್ರಾಮ್ ಚುನಾವಣೆಯಲ್ಲಿ ಜಯ ಗಳಿಸುತ್ತಾರೆ. ನೀವು ಭಾರಿ ಸೋಲಿನೊಂದಿಗೆ ವಿದಾಯ ಹೇಳಬೇಕು" ಎಂದು ತಿಳಿಸಿದ್ದಾರೆ.