ಬೆಂಗಳೂರು, ಎ.18 (DaijiworldNews/PY): ಭಾರತದ ಪ್ರಥಮ ಮಹಿಳಾ ಹಾಕಿ ಅಂಪೈರ್ ಕೊಡಗು ಮೂಲದ ಅನುಪಮಾ ಪುಚ್ಚಿಮಂಡ (41) ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಅನುಪಮಾ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ರವಿವಾರ ನಿಧನರಾಗಿದ್ದಾರೆ.
ಕೊಡಗಿನ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಮೂಲದವರಾದ ಅನುಪಮಾ ಅವರು ನೂರಕ್ಕೂ ಅಧಿಕ ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ತೀರ್ಪುಗಾರರಾಗಿದ್ದರು. ಕಿರಿಯರ ವಿಶ್ವಕಪ್ ಹಿರಿಯರ ವಿಶ್ವಕಪ್ ಲೀಗ್, ಏಷ್ಯಾಕಪ್, ಕಾಮನ್ವೆಲ್ತ್ನಲ್ಲಿ ಅಂಪೈರ್ ಆಗಿದ್ದು, ದೇಶದ ಮೊದಲ ಮಹಿಳಾ ಅಂಪೈರ್ ಎಂದು ಗುರುತಿಸಿಕೊಂಡಿದ್ದರು.