ನಾಸಿಕ್, ಎ.18 (DaijiworldNews/PY): ಹುಟ್ಟುಹಬ್ಬದ ಸಂಭ್ರಮದಲ್ಲಿ ಡ್ಯಾಮ್ ಎದುರುಗಡೆ ಫೋಟೋ ಕ್ಲಿಕ್ಕಿಸಲು ಹೋಗಿ ನಾಲ್ವರು ಮಕ್ಕಳು ಹಾಗೂ ಇಬ್ಬರು ಯುವತಿಯರು ಸೇರಿದಂತೆ ಆರು ಮಂದು ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವಲ್ದೇವಿ ಡ್ಯಾಮ್ ಸಮೀಪ ನಡೆದಿದೆ.
ಸಾಂದರ್ಭಿಕ ಚಿತ್ರ
ಸೋನಿ ಗೇಮ್ (12) ಎಂಬವರ ಬರ್ತ್ಡೇ ಆಚರಿಸಲು 9 ಜನರ ಗುಂಪೊಂದು ಡ್ಯಾಮ್ ಬಳಿಗೆ ತೆರಳಿತ್ತು. ಈ ವೇಳೆ ಬರ್ತ್ಡೇ ಸಂಭ್ರಮಾಚರಣೆಯ ಗ್ರೂಪ್ ಫೋಟೋ ಕ್ಲಿಕ್ಕಿಸುವ ವೇಳೆ ಕೆಲವು ಮಂದಿ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಈ ಸಂದರ್ಭ ಅವರನ್ನು ರಕ್ಷಿಸಲು ಹೋದ ಇತರರೂ ಕೂಡಾ ನೀರು ಪಾಲಾಗಿದ್ದಾರೆ.
ತಂಡದಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಮೂರು ಸಾವಿನಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯಲಾಗಿದೆ.