ಚಂಡೀಗಢ, ಏ.18 (DaijiworldNews/MB) : ನೂರು ರೂಪಾಯಿಯ ನೀಡಿಲ್ಲವೆಂಬ ಕಾರಣಕ್ಕೆ 21 ವರ್ಷದ ಯುವಕನನ್ನು ಇರಿದು ಕೊಲೆ ಮಾಡಿದ ಘಟನೆ ಚಂಡೀಗಢದ ಮೌಲಿ ಜಾಗ್ರಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಈಗಾಗಲೇ ನಾಲ್ವರ ವಿರುದ್ದ ದೂರು ದಾಖಲಾಗಿದ್ದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಅಪರಿಚಿತ ವ್ಯಕ್ತಿಗಳ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ. ಆದರೆ ಎಲ್ಲಾ ಆರೋಪಿಗಳನ್ನು ಬಂಧಿಸುವವರೆಗೂ ನಾವು ಮೃತ ದೇಹವನ್ನು ಸ್ವಾಧೀಕನಕ್ಕೆ ಪಡೆದುಕೊಳ್ಳಲಾರೆವು ಎಂದು ಯುವಕನ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ಮೃತ ಯುವಕನ್ನು ಅಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಭರತ್, ಗುರು, ರಾಹುಲ್, ಪ್ರದೀಪ್ ಹಾಗೂ ಕೆಲವು ಅಪರಿಚಿತ ವ್ಯಕ್ತಿಗಳನ್ನು ಒಳಗೊಂಡ ಗುಂಪು 100 ರೂ. ವಿಚಾರದಲ್ಲಿ ಈ ಕೃತ್ಯ ಎಸಗಿದ್ದು ಗಂಭೀರ ಗಾಯಗೊಂಡಿದ್ದ ಅಮಿತ್ ಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪೊಲೀಸರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
1600 ರೂ.ಗಳಲ್ಲಿ 100 ರೂ. ಬಾಕಿ ಇತ್ತು ಎಂಬ ಕಾರಣಕ್ಕೆ ಅಮಿತ್ ಕುಮಾರ್ಗೆ ಚೂರಿಯಿಂದ ತಂಡವು ಇರಿದಿದೆ. ಅಮಿತ್ ಕುಮಾರ್ ಲವು ದಿನಗಳ ಹಿಂದೆ ಹಲ್ಲೆಕೋರರಲ್ಲಿ ಒಬ್ಬರಿಂದ ಆಕ್ಟಿವಾ ಸ್ಕೂಟರ್ ತೆಗೆದುಕೊಂಡಿದ್ದು, ಅದಕ್ಕೆ ಹಾನಿಯಾಗಿತ್ತು. ಅದನ್ನು ಸರಿಪಡಿಸುವಂತೆ ಹಲ್ಲೆಕೋರರು ಅಮಿತ್ಗೆ ತಿಳಿಸಿದ್ದರು. ಆದರೆ ಅಮಿತ್ ರಿಪೇರಿ ವೆಚ್ಚ 1500 ರೂ.ಗಳನ್ನು ನೀಡಿದ್ದು ಆದರೆ ಈ ಹಲ್ಲೆಕೋರರು 100 ರೂ. ಅಧಿಕ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಅಮಿತ್ 100 ರೂ ನೀಡಲು ನಿರಾಕರಿಸಿದ್ದು ಇದರಿಂದ ಕೋಪಗೊಂಡ ಆರೋಪಿಗಳು ಅಮಿತ್ಗೆ ಇರಿದಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗುರು ಮತ್ತು ಭರತ್ ಎಂಬವರನ್ನು ಬಂಧಿಸಿದ್ದು ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಆದರೆ ಏತನ್ಮಧ್ಯೆ ಮೃತನ ಕುಟುಂಬಸ್ಥರು ಎಲ್ಲಾ ಆರೋಪಿಗಳ ಬಂಧನದವರೆಗೂ ನಾವು ಮರಣೋತ್ತರ ಪರೀಕ್ಷೆಗೆ ಸಹಕರಿಸುವುದಿಲ್ಲ, ಶವಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದ್ದಿದ್ದಾರೆ. ಹಾಗೆಯೇ ಪೊಲೀಸ್ ಠಾಣೆಯಲ್ಲಿ 20-24 ಕ್ಕೂ ಹೆಚ್ಚು ಜನರು ಜಮಾಯಿಸಿ ಎಲ್ಲರನ್ನೂ ಬಂಧಿಸುವವರೆಗೂ ನಾವು ಶವವನ್ನು ಸ್ವಾಧೀನಕ್ಕೆ ಪಡೆಯಲಾರೆವು ಎಂದು ಹೇಳಿದ್ದಾರೆ.
ಕುಟುಂಬವು ವಿಚಾರಣೆಗೆ ಸಹಕರಿಸದ ಕಾರಣ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಈವರೆಗೂ ಸಾಧ್ಯವಾಗಿಲ್ಲ. ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.