ರಾಯ್ಪುರ, ಏ. 18 (DaijiworldNews/HR): ಛತ್ತೀಸ್ಗಢ್ ರಾಜ್ಯದ ರಾಯ್ಪುರದ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಐದು ಮಂದಿ ರೋಗಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ರಾಯ್ಪುರದ ರಾಜಧಾನಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿದ್ದ ಉಳಿದ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ರಮೇಶ್ ಸಾಹು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದು, ಈಶ್ವರ್ ರಾವ್, ವಂದನಾ ಗಜ್ಮಾಲಾ, ಭಾಗ್ಯ ಶ್ರೀ ಮತ್ತು ದೇವಿಕಾ ಸೋಂಕರ್ ಎಂಬ ನಾಲ್ವರು ಹೊಗೆಯಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.