ಚಿಕ್ಕಮಗಳೂರು, ಏ. 17 (DaijiworldNews/HR): "ಸಾರ್ವಜನಿಕರು ಎಸ್ಎಮ್ಎಸ್( SMS) ಕ್ರಮವನ್ನು ಅನುಸರಿಸಿದ್ರೆ ಲಾಕ್ಡೌನ್ ಅವಶ್ಯಕತೆ ಇಲ್ಲ" (ಎಸ್ -ಸ್ಯಾನಿಟೇಷನ್, ಎಮ್ -ಮಾಸ್ಕ್, ಎಸ್ -ಸೋಶಿಯಲ್ ಡಿಸ್ಟೆನ್ಸ್) ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು 1 ರಿಂದ 9 ನೇ ತರಗತಿ ಪರೀಕ್ಷೆ ವಿಚಾರವಾಗಿ ಮಾತನಾಡಿರುವ ಅವರು, "ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ, ಸಂಬಂಧಪಟ್ಟವರನ್ನು ಕರೆದು ಚರ್ಚಿಸಿದ್ದೇವೆ. ಪರೀಕ್ಷೆ ಬಗ್ಗೆ ಅವರೆಲ್ಲರ ಅಭಿಪ್ರಾಯವನ್ನು ಸ್ವೀಕರಿಸಿ ಇನ್ನೇರಡು ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಂಡು ತೀರ್ಮಾನ ಪ್ರಕಟಿಸಲಿದ್ದೇವೆ" ಎಂದರು.
ಇನ್ನು ಇದೇ ವೇಳೆ ಕೊರೊನಾ ಮುಂಜಾಗ್ರತೆ ಬಗ್ಗೆ ಮಾತನಾಡಿರುವ ಅವರು, ಎಸ್ಎಮ್ಎಸ್ ಕ್ರಮವನ್ನು ಸಾರ್ವಜನಿಕರು ಅನುಸರಿಸಿದ್ರೆ ಲಾಕ್ಡೌನ್ ಅವಶ್ಯಕತೆ ಇಲ್ಲ, ನಮಗೆ ಕೊರೊನಾ ಬರೋದಿಲ್ಲ ಅಂತ ಜನರು ಓಡಾಡುತ್ತಿದ್ದಾರೆ. ಯಾವುದೋ ಒಂದು ಸಾವು ನಮಗೆ ಸಂಖ್ಯೆ ಆಗಬಾರದು ಆ ಮನೆಯ ದುಃಖ ನಮಗೆ ಅರ್ಥವಾಗಬೇಕು" ಎಂದು ಹೇಳಿದ್ದಾರೆ.