ಚಂಡೀಗಡ, ಎ.17 (DaijiworldNews/PY): "ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆಯನ್ನು ಪುನರಾರಂಭಿಸಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರೆ ಬರೆದಿರುವ ಅವರು, "ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ರಸ್ತೆಗಳಲಿದ್ದಾರೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಈ ಪ್ರತಿಭಟನೆಯು ನೂರಕ್ಕಿಂತ ಅಧಿಕ ದಿನ ಮುಂದುವರಿದಿರುವುದು ಕಳವಳಕಾರಿ ವಿಚಾರ" ಎಂದಿದ್ದಾರೆ.
"ಮಾತುಕತೆಯ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸಂಯುಕ್ತ ಮೋರ್ಚಾದ ಹಲವು ಸಮಸ್ಯೆಗಳಿಗೆ ಈ ಹಿಂದೆ ಸರ್ಕಾರ ಹಾಗೂ ರೈತರ ಮಧ್ಯೆ ನಡೆದ ಮಾತುಕತೆಯಿಂದ ಪರಿಹಾರ ದೊರೆತಿತ್ತು. ಹಾಗಾಗಿ ಈಗಲೂ ಅದೇ ರೀತಿ 3-4 ಸಚಿವರನ್ನೊಳಗೊಂಡ ತಂಡವು ಮಾತುಕತೆ ನಡೆಸುವುದು ಉತ್ತಮ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.