ನವದೆಹಲಿ, ಎ.17 (DaijiworldNews/PY): ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಶನಿವಾರ ಜಾರ್ಖಂಡ್ ಹೈಕೋರ್ಟ್ ಜಾಮೀನು ಈ ಮೂಲಕ ಲಾಲು ಪ್ರಸಾದ್ ಯಾದವ್ಗೆ ಬಿಗ್ ರಿಲೀಫ್ ಸಿಕ್ಕಿದೆ.
ಬಿಹಾರ ಮಾಜಿ ಸಿಎಂ ಲಾಲುಪ್ರಸಾದ್ ಯಾದವ್ ದುಮ್ಕಾ ಖಜಾನೆ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಜಾರ್ಖಂಡ್ ನಗರದಲ್ಲಿನ ಖಜಾನೆಯಿಂದ 3.13 ಕೋಟಿ ರೂಪಾಯಿ ತೆಗೆದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು.
ಲಾಲುಪ್ರಸಾದ್ ಯಾದವ್ ಅವರು 2021ರ ಫೆಬ್ರವರಿ 19ರಂದು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು.
ಈ ಹಿಂದೆ ಬಿಹಾರ ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ಪೈಕಿ ಲಾಲೂ ಪ್ರಸಾದ್ ಅವರು ಮೂರರಲ್ಲಿ ಜಾಮೀನು ಪಡೆದಿದ್ದರು. ಇದೀಗ ಬಾಕಿಯಿದ್ದ ದುಮ್ಕಾ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ನಿಂದ ಜಾಮೀನು ಪಡೆದಿದ್ದಾರೆ.