ಬೆಂಗಳೂರು, ಏ. 16 (DaijiworldNews/SM): ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕಟ್ಟಿನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ. ಇದರಂತೆ ರಾಜ್ಯದಲ್ಲಿ ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಿ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಇನ್ನುಳಿದಂತೆ ಮದುವೆ ಸಮಾರಂಭಗಳಲ್ಲಿ ಗರಿಷ್ಟ ಇನ್ನೂರು ಜನರು ಭಾಗವಹಿಸಬಹುದಾಗಿದೆ. ಹೊರಾಂಗಣ ಸಮಾರಂಭದಲ್ಲಿ ಗರಿಷ್ಟ ಇನ್ನೂರು ಜನರು ಭಾಗವಹಿಸಬಹುದಾಗಿದೆ. ಉಳಿದಂತೆ ಒಳಾಂಗಣ ಸಮಾರಂಭಗಳಲ್ಲಿ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಹುಟ್ಟು ಹಬ್ಬ ಸೇರಿಂದತೆ ಇತರ ಸಮಾರಂಭಗಳಿಗೆ ಹೊರಾಂಗಣದಲ್ಲಿ 50 ಜನ ಸೇರಬಹುದಾಗಿದ್ದು, ಒಳಾಂಗಣದಲ್ಲಿ 25 ಜನರು ಮಾತ್ರ ಭಾಗವಹಿಸಬಹುದಾಗಿದೆ. ಉಳಿದಂತೆ ಶವಸಂಸ್ಕಾರದಲ್ಲಿ ಗರಿಷ್ಠ 50 ಜನರು ಭಾಗವಹಿಸಬಹುದಾಗಿದೆ. ಇನ್ನು ಅಂತ್ಯ ಸಂಸ್ಕಾರದಲ್ಲಿ 25 ಜನರು ಮಾತ್ರವೇ ಭಾಗವಹಿಸಬಹುದಾಗಿದೆ.