ಕೋಲ್ಕತ್ತ, ಎ.16 (DaijiworldNews/PY): "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರವಾಸಿ ರಾಜಕಾರಣಿ" ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ಮೊದಲು ರಾಹುಲ್ ಗಾಂಧಿ ಅವರು ಪಶ್ಚಿಮಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸಿರಲಿಲ್ಲ. ಅವರು ಕೇರಳ, ತಮಿಳುನಾಡು, ಪುದುಚೇರಿ, ಅಸ್ಸಾಂಗಳಲ್ಲಿ ಮಾತ್ರವೇ ಚುನಾವಣಾ ಪ್ರಚಾರ ಕೈಗೊಂಡಿದರು. ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ ಮುಗಿದ ನಂತರ ಪ್ರಚಾರಕ್ಕೆ ಬಂದಿದ್ದಾರೆ" ಎಂದು ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಅಭಿವೃದ್ದಿ ಬಯಸಿದರೆ, ಪಶ್ಚಿಮಬಂಗಾಳ ಸಿಎಂ ಮಮತ ಬ್ಯಾನರ್ಜಿ ಅವರು ನುಸುಳುಕೋರರಿಗೆ ಸಹಾಯ ಮಾಡಲು ಬಯಸುತ್ತಿದ್ದಾರೆ. ಯಾವ ಸರ್ಕಾರ ಬೇಕು ಎನ್ನುವುದನ್ನು ಈಗ ನೀವೇ ತೀರ್ಮಾನ ಮಾಡಿ" ಎಂದಿದ್ದಾರೆ.
"ಪ್ರಧಾನಿ ಮೋದಿ ಅವರ ಬಂಗಾರದ ಬಂಗಾಳ ಬೇಕಾ ಅಥವಾ ನುಸುಳಕೋರರಿಗೆ ಸಹಾಯ ಮಾಡುವ ಮಮತಾ ಬ್ಯಾನರ್ಜಿ ಅವರ ಬಂಗಾಳ ಬೇಕಾ ಎನ್ನುವುದನ್ನು ನೀವೇ ತೀರ್ಮಾನಿಸಿ" ಎಂದು ಹೇಳಿದ್ದಾರೆ.
"ಬಿಜೆಪಿಯನ್ನು ನೀವು ಮೇ 2ರ ಬಳಿಕ ಅಧಿಕಾರಕ್ಕೆ ತಂದ ನಂತರ ನುಸುಳುಕೋರರಿಗೆ ಅವಕಾಶವಿಲ್ಲ ಎಂದು ಭರವಸೆ ನೀಡುತ್ತಿದ್ದೇನೆ" ಎಂದಿದ್ದಾರೆ.