ಲಖನೌ, ಏ.16 (DaijiworldNews/HR): ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ರವಿವಾರ ಮಾರುಕಟ್ಟೆಗಳನ್ನು ಮುಚ್ಚಲು ಹೇಳಿದ್ದು "ಸಂಡೇ ಲಾಕ್ ಡೌನ್" ಘೋಷಿಸಿದೆ. ಅಷ್ಟೆ ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ ಮಾಡಿದ್ದರೆ ಮೊದಲ ಬಾರಿ 1,000 ರೂ ಮತ್ತು ಎರಡನೇ ಬಾರಿಗಾದರೆ 10,000 ರೂ. ದಂಡ ವಿಧಿಸುವುದಾಗಿ ಪ್ರಕಟಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್, "ಬೇರೆ ಜನರ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ವಿವಿಧ ದಿನಗಳಲ್ಲಿ ಲಾಕ್ ಮಾಡಲಾಗುವ ಮಾರುಕಟ್ಟೆಗಳನ್ನು ಈಗ ರವಿವಾರ ಲಾಕ್ ಮಾಡುತ್ತೇವೆ ಮತ್ತು ರವಿವಾರದಂದು ನೈರ್ಮಲ್ಯೀಕರಣ ಮತ್ತು ಸ್ವಚ್ಚತಾ ಕಾರ್ಯಗಳನ್ನು ಮಾಡಲಾಗುವುದು" ಎಂದರು.
ಇನ್ನು "ಉತ್ತರಪ್ರದೇಶದ ಎಲ್ಲಾ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಬೇಕು. ಪ್ರಯಾಗರಾಜ್ನಲ್ಲಿ, ಅವಿಲಾಂಬ್ ಯುನೈಟೆಡ್ ಮೆಡಿಕಲ್ ಕಾಲೇಜನ್ನು ಮೀಸಲಾದ ಕೊರೊನಾ ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು" ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.