ಕೊಲ್ಲಂ, ಏ 16 (DaijiworldNews/MS): ಕ್ರೈಸ್ತ ಸನ್ಯಾಸಿನಿಯೋರ್ವರ ಮೃತದೇಹ ಕುರೀಪುಳದಲ್ಲಿರುವ ಕಾನ್ವೆಂಟ್ನ ಪಕ್ಕದ ಬಾವಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಕರುಣಗಪ್ಪಳ್ಳಿ ಪಾವುಂಬಾ ಮೂಲದ ಮಾಬೆಲ್ ಜೋಸೆಫ್ (42) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಪ್ರಾರ್ಥನೆಯನ್ನುಹಾಜರಾದ ಅವರನ್ನು ಅವರ ಸಹವರ್ತಿ ಸನ್ಯಾಸಿನಿ ಹುಡುಕುವಾಗ ಅವರ ಮೃತದೇಹವು ಬಾವಿಯೊಳಗೆ ಪತ್ತೆಯಾಗಿದೆ.
"ಆರೋಗ್ಯ ಸಮಸ್ಯೆಗಳು ಮತ್ತು ದೇಹದಲ್ಲಿರುವ ಅಲರ್ಜಿ ಸಮಸ್ಯೆಯಿಂದಾಗಿ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ, ಎನ್ನುವ ಪತ್ರ ಸನ್ಯಾಸಿನಿ ಮಲಗುವ ಕೋಣೆಯಲ್ಲಿ ಪತ್ತೆಯಾಗಿದ್ದು, ಆ ಪತ್ರದಲ್ಲಿ "ನನ್ನ ದೇಹವು ಬಾವಿಯೊಳಗೆ ಇರುತ್ತದೆ" ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ನನ್ನ ಸಾವಿಗೆ ಯಾರೂ ಕಾರಣರಲ್ಲ. ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ಸ್ಮರಿಸಿ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಮಾಬೆಲ್ ಅವರು ಆರು ತಿಂಗಳ ಹಿಂದೆ ಕಾನ್ವೆಂಟ್ ಗೆ ಬಂದಿದ್ದರು. ಮಾಬೆಲ್ ಅವರ ದೇಹವನ್ನು ಹೊರ ತೆಗೆಯಲಾಗಿದೆ.