ಕೊಲ್ಕತ್ತಾ, ಏ.14 (DaijiworldNews/HR): "ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯು 70 ಕ್ಷೇತ್ರಗಳಲ್ಲಿ ಕೂಡ ಗೆಲುವು ಸಾಧಿಸುವುದಿಲ್ಲ" ಎಂದು ತೃಣ ಮೂಲ ಕಾಂಗ್ರೆಸ್ ನಾಯಕಿ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಜಲ್ಪೈಗುರಿ ಜಿಲ್ಲೆಯ ಡಬ್ಗ್ರಾಮ್ ಫುಲ್ಬಾರಿಯಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಅವರು, "ಬಿಜೆಪಿಯು ಈಗಾಗಲೇ ನಡೆದ 4 ಹಂತಗಳ ಚುನಾವಣೆಯಲ್ಲಿನ 135 ಕ್ಷೇತ್ರಗಳಲ್ಲಿ 100 ಕ್ಷೇತ್ರಗಳನ್ನು ಗೆದ್ದಾಗಿದೆ ಎಂದು ಮೋದಿ ಹೇಳಿದ್ದಾರೆ. ಆದರೇ ನಾನು ಹೇಳುತ್ತೆನೆ, ಚುನಾವಣೆಯ ಎಲ್ಲಾ ಹಂತಗಳು ಮುಗಿದ ಮೇಲೆ 294 ಕ್ಷೇತ್ರಗಳ ಪೈಕಿಯಲ್ಲಿ 70 ಕ್ಷೇತ್ರಗಳಲ್ಲಿಯೂ ಕೂಡ ಬಿಜೆಪಿ ಜಯ ಸಾಧಿಸುವುದಿಲ್ಲ" ಎಂದರು.
ಇನ್ನು ಎನ್ಆರ್ಸಿ ಇರುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಡಾರ್ಜಿಲಿಂಗ್ ನ ಲೆಬಾಂಗ್ ನಲ್ಲಿ ಹೇಳಿದ್ದಾರೆ, ಆದರೆ ರಾಷ್ಟ್ರೀಯ ನಾಗರಿಕ ನೋಂದಣಿ ಅಡಿಯಲ್ಲಿ ಅಕ್ರಮ ವಲಸಿಗರನ್ನು ಹುಡುಕುವ ಪ್ರಕ್ರಿಯೆಯ ಆಧಾರದ ಮೇಲೆ 14 ಲಕ್ಷ ಜನರನ್ನು ಗುರುತಿಸಿ ಬಂಧನ ಶಿಬಿರಗಳಿಗೆ ಕಳುಹಿಸಲಾಗಿದೆ" ಎಂದು ಅವರು ಆರೋಪಿಸದ್ದಾರೆ.