ಧಾರವಾಡ, ಎ.14 (DaijiworldNews/PY): "ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಎಂದು ರಾಜ್ಯದ ಜನತೆಗೆ ನಾವು ಕರೆ ಕೊಡುತ್ತೇವೆ" ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರಕ್ಕೆ ಸಂವೇದನಾಶೀಲತೆ ಇಲ್ಲ. ರಾಜಕೀಯವಾಗಿ ಇವರನ್ನು ಉಚ್ಛಾಟನೆ ಮಾಡುವ ಅಗತ್ಯವಿದೆ" ಎಂದಿದ್ದಾರೆ.
"ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯಲ್ಲಿ ಸೋಲಿಸಿ ಎಂದು ರಾಜ್ಯದ ಜನರಿಗೆ ನಾವು ಕರೆ ಕೊಡುತ್ತೇವೆ. ಬಿಜೆಪಿ ಸರ್ಕಾರ ಸರ್ವಾಧಿಕಾರತ್ಮ ತೋರುತ್ತಿದೆ. ಅಲ್ಲದೇ, ದಬ್ಬಾಳಿಕೆಯಿಂದ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಹೇರುತ್ತಿದೆ" ಎಂದು ಹೇಳಿದ್ದಾರೆ.
"ಸರ್ಕಾರ ಜನರಿಂದ ಆಯ್ಕೆಯಾಗಿದ್ದು, ಹಾಗಾಗಿ ಜನರನ್ನು ಕೇಳಿ ಕಾಯ್ದೆಯನ್ನು ಜಾರಿಗೆ ತರಬೇಕು. ಸರ್ಕಾರ ಆ ರೀತಿ ಮಾಡುತ್ತಿಲ್ಲ" ಎಂದಿದ್ದಾರೆ.