ಮುಂಬೈ, ಏ.14 (DaijiworldNews/HR): "ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಚಾರದಲ್ಲಿ ಪಕ್ಷಪಾತ ನೀತಿ ಅನುಸರಿಸುತ್ತಿದೆ" ಎಂದು ಶಿವಸೇನಾ ಆರೋಪಿಸಿದೆ.
ಈ ಕುರಿತು ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿಉಲ್ಲೇಖಿಸಿರುವ ಶಿವಸೇನಾ, "ಇತ್ತೀಚೆಗೆ ಚುನಾವಣೆ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಅವರು ಮಾಡಿದ ಕೆಲವು ಟೀಕೆಗಳಿಗಾಗಿ, ಚುನಾವಣಾ ಆಯೋಗ 24 ಗಂಟೆಗಳ ಕಾಲ ಪ್ರಚಾರ ಮಾಡದಂತೆ ಅವರ ಮೇಲೆ ನಿರ್ಬಂಧ ಹೇರಿದ್ದು, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು, ರಾಜಕೀಯ ಲಾಭಕ್ಕಾಗಿ ಈ ರೀತಿ ಕೀಳಾಗಿ ವರ್ತಿಸಬಾರದು" ಎಂದಿದೆ.
ಇನ್ನು ಚುನಾವಣಾ ಆಯೋಗವು ಮಮತಾ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದ್ದು, ನಾವು ಆಯೋಗದ ಎದುರು ಕೈ ಮುಗಿದು ಕೇಳುತ್ತೇವೆ, ಚುನಾವಣಾ ಆಯೋಗ ಕೇವಲ ಬಿಜೆಪಿಯವರ ಮಾತನ್ನಷ್ಟೇ ಕೇಳಬಾರದು, ಎಲ್ಲ ಪಕ್ಷಗಳ ಅಭಿಪ್ರಾಯವನ್ನೂ ಆಲಿಸಬೇಕು" ಎಂದು ಹೇಳಿದೆ.
ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ವೇಳೆ ಪ್ರತಿಯೊಬ್ಬರೂ ಶಿಷ್ಟಾಚಾರವನ್ನು ಮರೆತು ಚುನಾವಣಾ ಆಯೋಗ ಬ್ಯಾನರ್ಜಿಯವರಿಗೆ ಮಾತ್ರ ಶಿಕ್ಷೆ ನೀಡಿದೆ ಎಂದು ಶಿವಸೇನಾ ಆರೋಪಿಸಿದೆ