ಶ್ರೀನಗರ, ಎ.14 (DaijiworldNews/PY): ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಜಮ್ಮು-ಕಾಶ್ಮೀರದಲ್ಲಿ ಬಂಧಿಸಲಾಗಿದೆ ಎಂದು ಬುಧವಾರ ವರದಿಗಳಿಂದ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಬಂಧಿತ ಉಗ್ರರನ್ನು ಜಹೀನ್ ಜಾವೈದ್ ದಾರ್ ಹಾಗೂ ಜಾವೈದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.
ಕಾಶ್ಮೀರ ಪೊಲೀಸ್ ಐಜಿ ವಿಜಯ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ ಅವರು, "ಕುಲ್ಗಾಂನಲ್ಲಿ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಹಾಗೂ ಮೂವರು ಓವರ್ ಗ್ರೌಂಡ್ ಕಾರ್ಮಿಕರನ್ನು ಕುಲ್ಗಾಂ ಪೊಲೀಸರು ಬಂಧಿಸಿದ್ದಾರೆ" ಎಂದು ತಿಳಿಸಿದ್ದಾರೆ.