ಲಕ್ನೋ, ಎ.14 (DaijiworldNews/PY): "ಲಾಕ್ಡೌನ್ ಭೀತಿಯಿಂದ ತಮ್ಮ ಸ್ವಂತ ಸ್ಥಳಗಳಿಗೆ ವಾಪಾಸ್ಸಾಗಲು ತೀರ್ಮಾನಿಸಿರುವ ವಲಸಿಗರಿಗೆ ಸರ್ಕಾರ ಉಚಿತ ಊಟ ಹಾಗೂ ವಸತಿ ನೀಡಬೇಕು" ಎಂದು ಸರ್ಕಾರಕ್ಕೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಒತ್ತಾಯಿಸಿದ್ದಾರೆ.
ಕೊರೊನಾದ ಎರಡನೇ ಅಲೆಯ ಪರಿಣಾಮ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಉಚಿತ ಲಸಿಕೆ ನೀಡುವಂತೆ ಕೂಡಾ ಮಾಯಾವತಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅಂಬೇಡ್ಕರ್ ಜಯಂತಿ ಅಂಗವಾಗಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, "ಲಾಕ್ಡೌನ್ ಭೀತಿ ಹಿನ್ನೆಲೆ ವಲಸಗರು ತಮ್ಮ ಊರುಗಳಿಗೆ ವಾಪಸ್ಸಾಗಲು ಯೋಜಿಸುತ್ತಿದ್ದು, ಅವರಿಗೆ ಆಹಾರ ಹಾಗೂ ವಸತಿಗಾಗಿ ಸಾಕಷ್ಟು ವ್ಯವಸ್ಥೆಗಳನ್ನ ರಾಜ್ಯ ಸರ್ಕಾರ ಮಾಡಬೇಕು. ವಲಸಿಗರಿಂದ ಕೊರೊನಾ ಮತ್ತಷ್ಟು ಹರಡುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕರಗಳಿಗೂ ಕೇಂದ್ರ ಸರ್ಕಾರ ನೆರವಾಗಬೇಕು" ಎಂದಿದ್ದಾರೆ.