ಬೆಂಗಳೂರು, ಏ.14 (DaijiworldNews/HR): "ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗಿ ಮತ್ತೆ ಲಾಕ್ಡೌನ್ ಆಗಬಹುದೆಂಬ ಭಯ ಆವರಿಸಿದ್ದರು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಾಕ್ಡೌನ್ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದು, ಇದಕ್ಕೆ ಒತ್ತನ್ನು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್ಡೌನ್ ಬೇಡ" ಎಂದು ಹೇಳಿದ್ದಾರೆ.
ಸರ್ವಪಕ್ಷಗಳೊಂದಿಗೆ ಸಭೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, "ಸಭೆಗೆ ನನಗೆ ಅಧಿಕೃತವಾಗಿ ಆಹ್ವಾನ ಬಂದಿಲ್ಲ, ಜೊತೆಗೆ ಕಳೆದ ಬಾರಿ ಕೊರೊನಾ ವೇಳೆ ರಾಜ್ಯ ಸರ್ಕಾರ ಘೋಷಿಸಿದ್ದ ಪರಿಹಾರ ಹಣವನ್ನು ಆಟೋ, ಚಾಲಕರಿಗೆ ಸೇರಿದಂತೆ ನೌಕರರಿಗೆ ಸಿಕ್ಕಿಲ್ಲ" ಎಂದು ಆರೋಪಿಸಿದ್ದಾರೆ.
ಇನ್ನು ನಮ್ಮ ಮಾತನ್ನು ರಾಜ್ಯ ಸರ್ಕಾರ ಈವರೆಗೆ ಕೇಳಲೇ ಇಲ್ಲ. ಇಷ್ಟಬಂದಂತೆ ಅವರೇ ತೀರ್ಮಾನಗಳನ್ನು ಕೈಗೊಂಡಿದ್ದರು. ಈಗ ಪರಿಸ್ಥಿತಿ ಕೈಮೀರಿದಾಗ ನಮಗೆ ಹೇಳುತ್ತಿದ್ದಾರೆ. ಜನ ಇವತ್ತು ನರಳುತ್ತಿದ್ದಾರೆ. ಲಾಕ್ಡೌನ್ ಮಾಡುವುದರಿಂದ ಏನ್ ಪ್ರಯೋಜವಿಲ್ಲ" ಎಂದು ಹೇಳಿದ್ದಾರೆ.