ದಾವಣಗೆರೆ, ಎ.14 (DaijiworldNews/PY): ಮಾಜಿ ಸಚಿವ ಯು.ಟಿ. ಖಾದರ್ ವರು ಪ್ರಯಾಣಿಸುತ್ತಿದ್ದ ಕಾರು ಎಪ್ರಿಲ್ 14ರ ಬುಧವಾರ ಬೆಳಗ್ಗೆ ಅಪಘಾತಕ್ಕೀಡಾದ ಘಟನೆ ಆನಗೋಡು ಬಸ್ ನಿಲ್ದಾಣದ ಸರ್ವಿಸ್ ರಸ್ತೆ ಸಮೀಪ ನಡೆದಿದೆ.
ಯು.ಟಿ ಖಾದರ್ ಅವರು ಬೆಳಗಾವಿ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಆನಗೋಡು ಹಂಪ್ಸ್ ಸಮೀಪ ಮುಂದಡ ಸಾಗುತ್ತಿದ್ದ ಕಂಟೈನರ್ಗೆ ಕಾರು ಢಿಕ್ಕಿ ಹೊಡೆದಇದೆ. ಢಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಖಾದರ್ ಅವರು ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಳಿಕ ಖಾದರ್ ಅವರು ಬೆಂಗಳೂರಿಗೆ ಹಿಂದಿರುಗಿದ್ದಾರೆ. ಘಟನಾ ಸ್ಥಳಕ್ಕೆ ಎಸ್.ಪಿ. ಹನುಮಂತರಾಯ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.