ಶ್ರೀನಗರ, ಏ.13 (DaijiworldNews/HR): ಮಗನನ್ನು ಗುಂಡಿಕ್ಕಿ ಹತ್ಯೆಗೈದಿರುವ ಉಗ್ರರನ್ನು ಕ್ಷಮಿಸಲು ಸಿದ್ಧ ಎಂದು ಶ್ರೀನಗರದ ಪ್ರಸಿದ್ಧ ಕೃಷ್ಣ ಡಾಬಾ ಸಸ್ಯಾಹಾರಿ ರೆಸ್ಟೋರೆಂಟ್ನ ಮಾಲೀಕ ರಮೇಶ ಕುಮಾರ್ ಹೇಳಿದ್ದಾರೆ.
ಸಾಂಧರ್ಭಿಕ ಚಿತ್ರ
ದುರ್ಗಾನಾಗ್ ಪ್ರದೇಶದಲ್ಲಿರುವ ಸ್ಥಿತಗೊಂಡಿರುವ ಐಷಾರಾಮಿ ಉಪಹಾರ ಗೃಹದಲ್ಲಿ ಫೆಬ್ರವರಿ 17ರಂದು ಸಂಜೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ರಮೇಶ್ ಅವರ ಪುತ್ರ ಆಕಾಶ್ ತೀವ್ರವಾಗಿ ಗಾಯಗೊಂಡು, ಫೆಬ್ರವರಿ 28ರಂದು ಮೃತಪಟ್ಟಿದ್ದರು.
"ಆಕಾಶ್ನ ಹತ್ಯೆಯಲ್ಲಿ ಭಾಗಿಯಾದವರೆಲ್ಲ ಅವರ ಹೆತ್ತವರ ಮಕ್ಕಳಾಗಿದ್ದು, ಅವರ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ. ಸರ್ಕಾರ ಅವರನ್ನು ಬಿಡುಗಡೆ ಮಾಡಲು ಬಯಸಿದರೂ ನನಗೆ ಯಾವುದೇ ಅಭ್ಯಂತರವಿಲ್ಲ" ಎಂದಿದ್ದಾರೆ.
ಇನ್ನು ಆಕಾಶ್ ಹತ್ಯೆ ಪ್ರಕರಣದ ಎರಡು ದಿನಗಳೊಳಗೆ ಆರೋಪಿಗಳಾದ ಮೂವರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು.