ನವದೆಹಲಿ, ಏ.13 (DaijiworldNews/MB) : ಕೇಂದ್ರ ಸರ್ಕಾರವು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಮತ್ತು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಎಂದು ಘೋಷಿಸಿದೆ.
ಮಂಗಳವಾರ ಈ ಬಗ್ಗೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್, "ನಾವು ಲಕ್ಷದ್ವೀಪ ಮತ್ತು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಎಂದು ಘೋಷಿಸಿದ್ದೇವೆ'' ಎಂದು ಹೇಳಿದ್ದಾರೆ.
''ಹಾಗೆಯೇ ಇದು ದೇಶವನ್ನೇ ಕ್ಷಯರೋಗ ಮುಕ್ತವಾಗಿಸುವಲ್ಲಿ ನಮ್ಮ ಹೆಗ್ಗರುತು. 2025 ರ ವೇಳೆಗೆ ಭಾರತ ಕ್ಷಯರೋಗ ಮುಕ್ತವಾಗಲಿದೆ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
''ಪ್ರಸ್ತುತ ಕೊರೊನಾ ವಿರುದ್ದದ ಹೋರಾಟದಿಂದ ನಾವು ಒಗ್ಗಟ್ಟಾಗಿದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಮನಗಂಡಿದ್ದೇವೆ, ಹಾಗೆಯೇ ಜಗತ್ತಿಗೂ ಇದನ್ನು ತೋರಿಸಿದ್ದೇವೆ'' ಎಂದು ಹೇಳಿದರು.
ಇನ್ನು ಇದೇ ವೇಳೆ ಪೋಲಿಯೊ ವಿರುದ್ಧದ ಹೋರಾಟವನ್ನು ಕೂಡಾ ಸಚಿವರು ನೆನಪಿಸಿಕೊಂಡರು, ''ನಾವು ದೇಶದಿಂದ ಪೋಲಿಯೊವನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ಭಾರತದಲ್ಲಿ ಅಪಾರ ಜನಸಂಖ್ಯೆ ಇರುವ ಕಾರಣದಿಂದಾಗಿ ಇದು ಒಂದು ಸವಾಲಾಗಿತ್ತು'' ಎಂದು ಹೇಳಿದರು.