ಕೋಲ್ಕತ್ತ, ಎ.13 (DaijiworldNews/PY): "ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸ್ಥಿತಿ ಸೋತ ಆಟಗಾರನ ರೀತಿ ಆಗಿದೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎಂದು ವ್ಯಂಗ್ಯವಾಡಿದ್ದಾರೆ.
ಬರ್ಧಮಾನ್ ಜಿಲ್ಲೆಯ ಪುರ್ಬಾದ ಕಲ್ನಾದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, "ಮಮತಾ ಬ್ಯಾನರ್ಜಿ ಅವರು ಬಿಜೆಪಿ ಹಗೂ ಚುನಾವಣಾ ಆಯೋಗದತ್ತ ಬೆಳು ತೋರಿಸುತ್ತಿದ್ದು, ರಾಜ್ಯದ ಜನರಿಗೆ ತಾನು ಏನು ಮಾಡಿದ್ದೇನೆ ಎನ್ನುವುದನ್ನು ಅವರು ಮರೆತಂದಿದೆ" ಎಂದಿದ್ದಾರೆ.
"ದೀದಿ ಅವರ ಪರಿಸ್ಥಿತಿ ಸೋತ ಆಟಗಾರನಂತಾಗಿದೆ. ರಾಜ್ಯದ ಜನತೆಗೆ ಅವರು ಹಲವು ವರ್ಷಗಳಿಂದ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಒಂದು ವೇಳೆ ಬಿಜೆಪಿಗೆ ಅಧಿಕಾರ ನೀಡಿದ್ದಲ್ಲಿ ಅಭಿವೃದ್ದಿಗೆ ಪ್ರಾಶಸ್ತ್ಯ ನೀಡಲಿದೆ. ಮಹಿಳೆಯರ ಮೇಲಾಗುವ ದೌರ್ಜನ್ಯ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಿದೆ' ಎಂದು ತಿಳಿಸಿದ್ದಾರೆ.