ನವದೆಹಲಿ, ಏ.13 (DaijiworldNews/HR): ಶನಿವಾರ ಮಧ್ಯ ರಾತ್ರಿ 12 ಗಂಟೆಯಿಂದ ಏಪ್ರಿಲ್ 18 ರ ರವಿವಾರ ಮಧ್ಯಾಹ್ನ 2 ಗಂಟೆವರೆಗೆ 14 ಗಂಟೆಗಳ ಕಾಲ ಇಡೀ ದೇಶಾದ್ಯಂತ ಆರ್ಟಿಜಿಎಸ್ ಸೇವೆ ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಕಟಣೆಯ ಪ್ರಕಾರ, ಏಪ್ರಿಲ್ 18 ರಂದು ಇಡೀ ದೇಶಾದ್ಯಂತ 14 ಗಂಟೆಗಳ ಕಾಲ ಆರ್ಟಿಜಿಎಸ್ ಸೇವೆ ಇರುವುದಿಲ್ಲ.
ಏಪ್ರಿಲ್ 17 ರ ರಾತ್ರಿಯ ವ್ಯವಹಾರ ಆದ ಬಳಿಕ ಏಪ್ರಿಲ್ 17 ರಾತ್ರಿ 12 ಗಂಟೆಗೆ ಈ ಕೆಲಸ ಪ್ರಾರಂಭವಾಗಿ ಮರುದಿನ ಅಂದರೆ ಏಪ್ರಿಲ್ 18 ರ ಮಧ್ಯಾಹ್ನ 2 ಗಂಟೆವರೆಗೆ ಈ ಕೆಲಸ ನಡೆಯಲಿದ್ದು, ಈ ಸಂದರ್ಭದಲ್ಲಿ ಆರ್ಟಿಜಿಎಸ್ ತಂತ್ರಾಂಶವನ್ನು ಉನ್ನತೀಕರಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ
"ಸದಸ್ಯ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಕ್ಕಂತೆ ಪಾವತಿ ಕಾರ್ಯಾಚರಣೆಗಳನ್ನು ಯೋಜಿಸುವಂತೆ ತಿಳಿಸಬಹುದು. ಈ ಅವಧಿಯಲ್ಲಿ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ (ಎನ್ಇಎಫ್ಟಿ) ವ್ಯವಸ್ಥೆಯು ಎಂದಿನಂತೆ ಕಾರ್ಯನಿರ್ವಹಿಸುತ್ತಲೇ ಇರುತ್ತದೆ" ಎಂದು ಆರ್ಬಿಐ ತಿಳಿಸಿದೆ.