ಬೆಂಗಳೂರು, ಏ13 (DaijiworldNews/MS): ಪವಿತ್ರ ರಂಜಾನ್ ಮಾಸ ಆರಂಭವಾಗಿದ್ದು, ರಾಜ್ಯಾದ್ಯಂತ ಮುಸ್ಲಿಮರು ತಿಂಗಳ ಕಾಲ ಉಪವಾಸ ಆಚರಿಸುತ್ತಾರೆ. ಈ ನಡುವೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ರಂಜಾನ್ ಆಚರಣೆಗೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿಲ್ಲ. ಇನ್ನು ನಮಾಜ್ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಇನ್ನು ಸಮೂಹಿಕವಾಗಿ ಇಫ್ತಿಯಾರ್ ಕೂಟ ಆಯೋಜನೆ ಅವಕಾಶವಿಲ್ಲ. ಮನೆಯಲ್ಲಿಯೇ ಇಫ್ತಿಯಾರ್ ಕೂಟ ಆಯೋಜಿಸಬಹುದು. ಅಲ್ಲದೆ ಮಸೀದಿಗೆ ಆಗಮಿಸಲು ಮತ್ತು ನಿರ್ಗಮಿಸಲು ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದೆ
ಪ್ರಾರ್ಥನೆಗೆ ಐದು ನಿಮಿಷ ಮೊದಲು ಮಸೀದಿ ತೆರಯಬೇಕು, ಪ್ರಾರ್ಥನೆಗೆ ಸ್ವಂತ ಜಮಖಾನೆಯನ್ನು ಮಾತ್ರ ಬಳಸಬೇಕು ಎಂದು ಹೇಳಿರುವ ಸರ್ಕಾರ ಕಂಟೈನ್ಮೆಂಟ್ ಜೋನ್ ಗಳಲ್ಲಿ ಇರುವ ಮಸೀದಿಗಳನ್ನು ತೆರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.