ಹುಬ್ಬಳ್ಳಿ, ಎ.13 (DaijiworldNews/PY): ರುಂಡ, ಮುಂಡ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿದ ಘಟನೆ ಹುಬ್ಭಳ್ಳಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿನ ಶಾಲೆಯೊಂದರ ಸಮೀಪ ಮೃತದೇಹ ಪತ್ತೆಯಾಗಿದ್ದು, ರುಂಡ-ಮುಂಡ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ಎಸೆಯಲಾಗಿದೆ. ಮೃತದೇಹದ ಎರಡು ಕೈ ಹಾಗೂ ಕಾಲು ದೊರಕಿದ್ದು, ಇನ್ನೊಂದು ಕಾಲಿಗಾಗಿ ಮತ್ತೆ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಕೇಶವಾಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿ ಯಾರು ಎಂದು ತಿಳಿದಿಲ್ಲ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.