ನವದೆಹಲಿ, ಏ.13 (DaijiworldNews/HR): ಸತತ ಮೂರನೇ ವರ್ಷ ಮಳೆಗಾಲ ಸಾಮಾನ್ಯವಾಗಿರುತ್ತದೆ ಎಂದು ಖಾಸಗಿ ಹವಾಮಾನ ಮನ್ಸೂಚನೆ ಕಂಪನಿಯಾದ ಸ್ಕೈಮೇಟ್ ವೆದರ್ ಮುನ್ಸೂಚನೆ ನೀಡಿದೆ.
ಸಾಂಧರ್ಭಿಕ ಚಿತ್ರ
ಸ್ಕೈಮೇಟ್ ಪ್ರಕಾರ, "ಮಾನ್ಸೂನ್ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದ್ದು, 2021 ರ ಪ್ರಾಥಮಿಕ ಮಾನ್ಸೂನ್ ಮುನ್ಸೂಚನೆಯ ಪ್ರಕಾರ ಜೂನ್ನಿಂದ ಸೆಪ್ಟೆಂಬರ್ ವರೆಗೆ ಮಳೆಯ ಸರಾಸರಿ ಶೇಕಡ 103 ರಷ್ಟು ಇದೆ" ಎಂದಿದೆ.
ಇನ್ನು 2020 ರಲ್ಲಿ 110 ಹಾಗೂ 2019ರಲ್ಲಿ 109 ರಷ್ಟು ಮಳೆಯಾಗಿದ್ದು, ಮುಂಗಾರು ಅವಧಿಯ ಸರಾಸರಿ ಉತ್ತಮವಾಗಿದ್ದು, ಈ ಬಾರಿ ಈಶಾನ್ಯ ಭಾಗದಲ್ಲಿ ಹಾಗೂ ಉತ್ತರ ಬಯಲು ಪ್ರದೇಶಗಳಲ್ಲಿ ಮುಂಗಾರು ಋತುವಿನಲ್ಲಿ ಮಳೆ ಕೊರತೆಯಾಗಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಮಾನ್ಸೂನ್ ತಿಂಗಳುಗಳಲ್ಲಿ ಉತ್ತಮ ಮಳೆಯಾಗಲಿದ್ದು, ಆಂತರಿಕ ಭಾಗದಲ್ಲಿ ಅಲ್ಪಪ್ರಮಾಣದ ಮಳೆಯಾಗಲಿದೆ. ಮುಂಗಾರು ಆರಂಭದ ಜೂನ್ ತಿಂಗಳು ಮತ್ತು ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಭಾರತದಾದ್ಯಂತ ಉತ್ತಮ ಮಳೆಯಾಗಲಿದೆ.
ಸ್ಕೈಮೆಟ್ ಸಿಇಓ ಯೋಗೇಶ್ ಪಾಟೀಲ್ ಅವರ ಪ್ರಕಾರ, "ಕಳೆದ ವರ್ಷದಿಂದ ಫೆಸಿಪಿಕ್ ಮಹಾಸಾಗರದಲ್ಲಿ ಲಾ ನಿನಾ, ಎಲ್ ನೀನೋ ಚಲನೆ ಮತ್ತು ತಟಸ್ಥವಾಗಿದ್ದು, ಮಾನ್ಸೂನ್ ಮಾರುತಗಳ ಮಳೆಗಾಲಕ್ಕೆ ಹಾನಿ ಮಾಡಬಹುದಾದ ಯಾವುದೇ ವಾತಾವರಣ ಇಲ್ಲ ಎನ್ನಲಾಗಿದೆ.
ಹಿಂದೂ ಮಹಾಸಾಗರದ ದ್ವಿಧ್ರುವಿ (ಐಒಡಿ) ತಟಸ್ಥವಾಗಿದೆ ಮತ್ತು ಶೂನ್ಯ ರೇಖೆಯ ಎರಡೂ ಬದಿಗಳಲ್ಲಿ ಲಘುವಾಗಿ ಆಂದೋಲನಗೊಳ್ಳುತ್ತಿದೆ. ಮಳೆಗಾಲಕ್ಕೆ ಹಾನಿಯಾಗುವ ಸಾಧ್ಯತೆ ಇಲ್ಲ.