ನವದೆಹಲಿ, ಏ.13 (DaijiworldNews/MB) : ಅಮೇರಿಕಾದ ಜನಪ್ರಿಯ ಗಾಯಕಿ ಮೇರಿ ಮಿಲ್ಬೆನ್ ಅವರು ಸಂಸ್ಕೃತ ಶ್ಲೋಕವನ್ನು ಪಠಿಸಿ ಹಿಂದೂಗಳಿಗೆ ಹೊಸ ವರುಷವೆಂದೇ ಆಚರಿಸಲಾಗುವ ಯುಗಾದಿಯ ಶುಭಕೋರಿದ್ದಾರೆ.
ಎಪ್ರಿಲ್ 13ರ ಮಂಗಳವಾರದಂದು ಚಾಂದ್ರಮಾನ ಯುಗಾದಿ ಹಾಗೂ ಎಪ್ರಿಲ್ 14ರ ಬುಧವಾರದಂದು ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತಿದೆ.
ಈ ಬಗ್ಗೆ ವಿಡಿಯೋ ಟ್ವೀಟ್ ಮಾಡಿರುವ ಅಮೇರಿಕಾದ ಜನಪ್ರಿಯ ಗಾಯಕಿ ಮೇರಿ ಮಿಲ್ಬೆನ್ ಅವರು, ''ನನ್ನ ಪ್ರೀತಿಯ ಭಾರತೀಯರಿಗೆ ಹಾಗೂ ಭಾರತೀಯ-ಅಮೇರಿಕನ್ ಸಮುದಾಯ ಹಾಗೂ ವಿಶ್ವದಾದ್ಯಂತ ನೆಲೆಸಿರುವ ಭಾರತೀಯ ಸಮುದಾಯಗಳಿಗೆ ಹೊಸ ವರ್ಷದ ಶುಭಾಶಯಗಳು. ಇಂದು, ಹೊಸ ವರ್ಷದ ಹುಮ್ಮಸ್ಸನಿಂದ ನೀವು ಆಶೀರ್ವದಿಸಲ್ಪಟ್ಟಿದ್ದೀರಿ ಎಂದು ನನ್ನ ಭಾವನೆ. ಈ ಹೊಸ ವರ್ಷವು ಹೆಚ್ಚು ಸಂತೋಷವನ್ನು ತರಲಿ. ತನ್ನ ಶುಭಾಶಯಗಳು'' ಎಂದು ಹೇಳಿದ್ದಾರೆ. ಹಾಗೆಯೇ ವಿಡಿಯೋದಲ್ಲಿ ಹಿಂದಿಯಲ್ಲಿ ಶುಭಕೋರಿದ್ದಾರೆ.