ನವದೆಹಲಿ, ಎ.13 (DaijiworldNews/PY): ರಷ್ಯಾದಲ್ಲಿ ಅಭಿವೃದ್ದಿಯಾಗಿರುವ ಸ್ಪುಟ್ನಿಕ್-ವಿ ಕೊರೊನಾ ಲಸಿಕೆಗೆ ಭಾರತದಲ್ಲಿ ಅನುಮತಿ ಸಿಕ್ಕಿದ್ದು, ಭಾರತ ಆ ದೇಶದ ಲಸಿಕೆ ಬಳಕೆಯನ್ನು ಆರಂಭಿಸಲಿರುವ 60ನೇ ರಾಷ್ಟ್ರವಾಗಿದೆ.
ಸಾಂದರ್ಭಿಕ ಚಿತ್ರ
ಭಾರತವು ವಾರ್ಷಿಕವಾಗಿ 850 ಮಿಲಿಯನ್ ಡೋಸ್ ಲಸಿಕೆಗಳನ್ನು ತಯಾರಿಸಲಿದೆ. ಇದು ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ ಎಂದು ರಷ್ಯಾದ ನೇರ ಬಂಡವಾಳ ನಿಧಿ ಈ ವಿಚಾರದ ಬಗ್ಗೆ ತಿಳಿಸಿದೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ತುರ್ತು ಬಳಕೆಯ ದೃಢೀಕರಣದ ವಿಧಾನದ ಅಡಿಯಲ್ಲಿ ಲಸಿಕೆಯನ್ನು ನೋಂದಾಯಿಸಿದೆ. ಇದು ರಷ್ಯಾದಲ್ಲಿ ನಡೆದಿರುವ ಕ್ಲಿನಿಕಲ್ ಪ್ರಯೋಗಗಳು ಹಾಗೂ ಭಾರತದಲ್ಲಿ ಡಾ. ರೆಡ್ಡೀಸ್ ಪ್ರಯೋಗಾಲಯದ ಸಹಭಾಗಿತ್ವದಲ್ಲಿ ನಡೆದಿರುವ ಮೂರನೇ ಹಂತದ ಸ್ಥಳೀಯ ಕ್ಲಿನಿಕಲ್ ಪ್ರಯೋಗಗಳ ಸಕಾರಾತ್ಮತ ದತ್ತಾಂಶಗಳನ್ನು ಪಡೆದು ಔಷಧ ನಿಯಂತ್ರಕ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.
ರಷ್ಯಾದ ಹೆಟೆರೊ ಬಯೋಫಾರ್ಮಾ, ಸ್ಟೆಲಿಸ್ ಬಯೋಫಾರ್ಮಾ, ಆರ್ಡಿಐಎಫ್ ಭಾರತದ ಗ್ಲಾಂಡ್ ಫಾರ್ಮಾ ಹಾಗೂ ವಿರ್ಚೋ ಬಯೋಟೆಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ವಾರ್ಷಿಕವಾಗಿ 850 ಮಿಲಿಯನ್ ಡೋಸ್ ಸ್ಪುಟ್ನಿಕ್ ಲಸಿಕೆಗಳನ್ನು ತಯಾರು ಮಾಡಲಿದೆ.