ಪಂಜಾಬ್, ಏ13 (DaijiworldNews/MS): ಬ್ರಿಟನ್ ರಾಜಕುಮಾರ ಹ್ಯಾರಿ ನನ್ನನ್ನು ಮದುವೆಯಾಗುವುದಾಗಿ ವಚನ ನೀಡಿ ಅದರಿಂದ ವಿಮುಖರಾಗಿದ್ದು ನ್ಯಾಯ ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ ಅರ್ಜಿಯನ್ನು ನ್ಯಾಯಾಲಯ "ಹಗಲುಗನಸು' ಎಂದು ತಿರಸ್ಕರಿಸಿದ ರಸವತ್ತಾದ ಪ್ರಸಂಗ ಬೆಳಕಿಗೆ ಬಂದಿದೆ.
ವಕೀಲೆ ಪಾಲ್ವಿಂದರ್ ಕೌರ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅರ್ಜಿ ಸಲ್ಲಿಸಿ "ಮದುವೆಯಾಗಿ ಭರವಸೆ ನೀಡಿ ಅದರಿಂದ ವಿಮುಖರಾದ ಬ್ರಿಟನ್ ನಿವಾಸಿ ಪ್ರಿನ್ಸ್ ಚಾರ್ಲ್ಸ್ ಮಿಡಲ್ಟನ್ ಅವರ ಪುತ್ರ ಪ್ರಿನ್ಸ್ ಹ್ಯಾರಿ ಮಿಡಲ್ಟನ್" ವಿರುದ್ಧ ಯುನೈಟೆಡ್ ಕಿಂಗ್ಡಮ್ ಪೊಲೀಸ್ ಸೆಲ್ಗೆ ಕ್ರಮ ಕೈಗೊಂಡು ಬಂಧಿಸಲು ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, " ನೀವು ಎಂದಾದರೂ ಬ್ರಿಟನ್ ಗೆ ಪ್ರಯಾಣಿಸಿದ್ದಾರಾ ಎಂಬ ಪ್ರಶ್ನೆಗೆ, ಇಲ್ಲ ಎಂದು ಅರ್ಜಿದಾರರು ಉತ್ತರಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪ್ರಿನ್ಸಸ್ ಜೊತೆ ಸಂಭಾಷಣೆ ನಡೆಸಿದ್ದು, ಮಾತ್ರವಲ್ಲದೆ ತಮ್ಮ ಕಿರಿಯ ಮಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ಪ್ರಿನ್ಸ್ ಚಾರ್ಲ್ಸ್ಗೆ ಸಂದೇಶಗಳನ್ನು ಕಳುಹಿಸಿದ್ದಾಗಿ ಹೇಳಿದ್ದಾರೆ.
ಫೇಸ್ಬುಕ್ ಮತ್ತು ಟ್ವಿಟರ್ನಂತಹ ಸೈಟ್ಗಳಲ್ಲಿ ರಚಿಸಲಾದ ನಕಲಿ ಐಡಿಗಳೊಂದಿಗೆ ಸಂಭಾಷಣೆ ನಡೆಸುವ ಸಾಧ್ಯತೆ ಇರುವುದರಿಂದ, "ನೀವು ಪ್ರಿನ್ಸ್ ಹ್ಯಾರಿ ಎಂದು ಕರೆಯಲ್ಪಡುವವರು ಪಂಜಾಬ್ನ ಹಳ್ಳಿಯ ಸೈಬರ್ ಕೆಫೆಯಲ್ಲಿ ಕುಳಿತುಕೊಳ್ಳುವ ಸಾಧ್ಯತೆಯಿದೆ, ಇದೊಂದು ಪ್ರಿನ್ಸ್ ಹ್ಯಾರಿ ಅವರನ್ನು ವಿವಾಹವಾಗಲು ಹಗಲು ಕನಸು ಕಾಣುವ ಅರ್ಜಿಯಾಗಿದೆ . ನ್ಯಾಯಾಲಯವು ಇಲ್ಲಿ ಸಹಾನುಭೂತಿಯನ್ನು ಮಾತ್ರ ವ್ಯಕ್ತಪಡಿಸಬಹುದು" ಎಂದು ಅರ್ಜಿಯನ್ನು ತಳ್ಳಿಹಾಕಿತು.