ನವದೆಹಲಿ, ಏ.13 (DaijiworldNews/HR): ಪತ್ನಿಯ ಜಿರಳೆಗಳ ಭಯದಿಂದ ಮದುವೆಯಾದ ಮೂರು ವರ್ಷಗಳಲ್ಲಿ 18 ಮನೆಗಳನ್ನು ಬದಲಾಯಿಸಿ ಘಟನೆ ಭೋಪಾಲ್ನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಪತ್ನಿಗೆ ಜಿರಳೆಗಳ ಭಯ, ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಪತಿ, ಪತ್ನಿಯ ಈ ವರ್ತನೆಯಿಂದ ಸ್ನೇಹಿತರು ಮತ್ತು ಕುಟುಂಬದವರಲ್ಲಿ ಮುಜುಗರಕ್ಕೊಳಗಾಗುವುದರಿಂದ ಬೇಸತ್ತಿದ್ದು ಡೈವೋರ್ಸ್ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ದಂಪತಿಗಳು 2018 ರಲ್ಲಿ ಮೊದಲ ಬಾರಿಗೆ ಮನೆಗಳನ್ನು ಬದಲಾಯಿಸಿದರು ಆದರೆ ಆಗಿನಿಂದ ಜಿರಳೆ ಕಾಟ ನಿಂತಿಲ್ಲ ಎನ್ನಲಾಗಿದ್ದು, ಅಂದಿನಿಂದ ದಂಪತಿಗಳು 18 ಮನೆಗಳನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ.
ಇನ್ನು ಚಿಕಿತ್ಸೆಗಾಗಿ ಅನೇಕ ಖಾಸಗಿ ಮನೋವೈದ್ಯರ ಬಳಿಗೆ ತನ್ನ ಹೆಂಡತಿಯನ್ನು ಕರೆದೊಯ್ದಿದ್ದೇನೆ ಎಂದು ವ್ಯಕ್ತಿಯು ಹೇಳಿಕೊಂಡಿದ್ದಾನೆ ಆದರೆ ಸೂಚಿಸಿದ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲು ಅವಳು ನಿರಾಕರಿಸಿದ್ದಾಳೆ ಎಂದಿದ್ದಾನೆ.