ಬೆಂಗಳೂರು, ಏ.13 (DaijiworldNews/MB) : ಮಧ್ಯ ಮಹಾರಾಷ್ಟ್ರದಿಂದ ತಮಿಳುನಾಡುವರೆಗೆ ತೇವಾಂಶಭರಿತ ಮೋಡಗಳು ಹಾದುಹೋಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮುಂದಿನ 5 ದಿನ ಮಳೆಯಾಗಲಿದ್ದು ಈ ಹಿನ್ನೆಲೆ ಹವಮಾನ ಇಲಾಖೆಯು ಕರಾವಳಿಯ ದಕ್ಷಿಣ ಕನ್ನಡ ಸೇರಿ ಹಲವೆಡೆ ಏ.13ರಿಂದ ಏ.16ರವರೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.
File Photo
ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಏ.14ರಿಂದ ಮೂರು ದಿನಗಳವರೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದ್ದು ಈ ಹಿನ್ನೆಲೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ.
ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ 72 ಗಂಟೆಗಳಲ್ಲಿ ಸಾಧಾರಣೆ ಮಳೆಯಾಗಲಿದೆ ಎಂದು ಕೂಡಾ ಇಲಾಖೆ ತಿಳಿಸಿದೆ.
ಇನ್ನು ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಕಾರಣದಿಂದಾಗಿ ತಮಿಳುನಾಡು, ಕೇರಳ, ಮಧ್ಯಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಮಧ್ಯಪ್ರದೇಶ, ವಿದರ್ಭ, ತೆಲಂಗಾಣ, ಛತ್ತೀಸ್ಗಢ, ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಮುಂದಿನ 5 ದಿನ ಮಳೆಯಾಗಲಿದೆ. ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ತಿಸ್ತಾನ್, ಮುಜರ್ಬಾದ್, ಹಿಮಾಚಲ ಪ್ರದೇಶದಲ್ಲಿ ಏ.14ರಂದ 16ರವರೆಗೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಕೂಡಾ ಇಲಾಖೆ ಮಾಹಿತಿ ನೀಡಿದೆ.