ಕಾರವಾರ, ಏ.13 (DaijiworldNews/MB) : ಕಾಳಿ ನದಿಯ ಸೇತುವೆ ಮೇಲಿಂದ ಸೆಲ್ಫಿ ತೆಗೆಯುವಾಗ ಯುವಕ ಹಾಗೂ ಯುವತಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಜೊಯಿಡಾ ತಾಲೂಕಿನ ಗಣೇಶಗುಡಿಯಲ್ಲಿರುವ ಸೂಪಾ ಡ್ಯಾಂ ಬಳಿಯ ಕಾಳಿ ಸೇತುವೆ ಬಳಿ ಸೋಮವಾರ ಸಂಜೆ ನಡೆದಿದೆ.
ಪ್ರಸ್ತುತ ಧಾರವಾಡದಲ್ಲಿ ವ್ಯಾಂಸಗ ಮಾಡುತ್ತಿರುವ ಬೀದರ್ ಮೂಲದ ವಿದ್ಯಾರ್ಥಿನಿ ರಕ್ಷಿತಾ ಮೃತ ಯುವತಿ ಎಂದು ತಿಳಿದು ಬಂದಿದೆ. ಇನ್ನು ಯುವಕ ನ ಗುರುತು ಇನ್ನೂ ಪತ್ತೆಯಾಗಿಲ್ಲ.
ಗಣೇಶಗುಡಿಯ ಡ್ಯಾಮ್ ಕೆಳಭಾಗದ ಸೇತುವೆಯ ಕಟ್ಟೆ ಮೇಲೆ ನಿಂತು ಈ ಯುವಜೋಡಿಯು ಸೆಲ್ಫಿ ಕ್ಲಿಕ್ಕಿಸಿದ್ದು ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಮೊದಲು ಆಯತಪ್ಪಿ ಯುವತಿ ಕೆಳಬಿದ್ದಿದ್ದು, ಆಕೆಯನ್ನು ಉಳಿಸುವ ಪ್ರಯತ್ನದಲ್ಲಿ ಯುವಕನೂ ಕೆಳ ಹಾರಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ರಾಮನಗರ ಪಿ.ಎಸ್.ಐ ಕಿರಣ ಪಾಟೀಲ ಮತ್ತು ಸಿಬ್ಬಂದಿ, ಜೊಯಿಡಾದ ಅಗ್ನಿಶಾಮಕ ಸಿಬ್ಬಂದಿ, ಮತ್ತು ವೈಟ್ ವಾಟರ್ ರಾಪ್ಟಿಂಗ್ ತಂಡ ಆಗಮಿಸಿದ್ದಾರೆ.