ತೆಲಂಗಾಣ,ಏ.12 (DaijiworldNews/HR): ಹೆಲ್ಮೆಟ್ ಧರಿಸದೇ ಇರುವುದೂ ಮಾತ್ರವಲ್ಲದೇ ತ್ರಿಬಲ್ ರೈಡಿಂಗ್ ನಲ್ಲಿ ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋದ ಮೂವರು ಮಹಿಳಾ ಕಾನ್ಸ್ಟೆಬಲ್ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಈ ಮೂವರು ಮಹಿಳಾ ಕಾನ್ಸ್ಟೆಬಲ್ಗಳಿಗೆ ತಲಾ 3,300 ರೂಪಾಯಿ ದಂಡ ವಿಧಿಸಲಾಗಿದ್ದು, ಜತೆಗೆ ಇಲಾಖಾವಾರು ತನಿಖೆಗೆ ಆದೇಶಿಸಲಾಗಿದೆ.
ಈ ದಂಡವನ್ನು ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ವಿಧಿಸಲಾಗಿದ್ದು, ಸಶಸ್ತ್ರ ವಿಭಾಗದ ಇಬ್ಬರು ಮಹಿಳಾ ಕಾನ್ಸ್ಟೆಬಲ್ಗಳು ಮತ್ತು ಒಬ್ಬರು ತೆಲಂಗಾಣದ ಟೌನ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಸಿವಿಲ್ ಕಾನ್ಸ್ಟೆಬಲ್ ಎನ್ನಲಾಗಿದೆ.
ಪೊಲೀಸರಿಗೂ ದಂಡ ವಿಧಿಸಿರುವುದರಿಂದ ಇದೀಗ ಪೊಲೀಸ್ ಇಲಾಖೆ ಭಾರಿ ಶ್ಲಾಘನೆಗೆ ಒಳಗಾಗಿದೆ.