ನವದೆಹಲಿ, ಏ.12 (DaijiworldNews/MB) : ಲಕ್ಷಾಂತರ ಪಬ್ಜೀ ಗೇಮ್ ಪ್ರಿಯರು ಅದರ ರಿಲಾಂಚ್ಗೆ ಕಾಯುತ್ತಿರುವ ನಡುವೆ ಈವರೆಗೆ ನಿಷೇಧವಾಗಿದ್ದ ಪಬ್ ಜೀ ಗೇಮ್ ಭಾರತದಲ್ಲಿ ಮುಂದಿನ ಎರಡು ತಿಂಗಳುಗಳಲ್ಲಿ ರಿಲಾಂಚ್ ಮಾಡಲು ಸಿದ್ದತೆ ನಡೆಯುತ್ತಿದೆ ಎನ್ನಲಾಗಿದೆ.
ಕಳೆದ ಸೆಪ್ಟೆಂಬರ್ನಲ್ಲಿ ವೈಯಕ್ತಿಕ ವಿವರಗಳ ಖಾಸಗಿತನದ ವಿಚಾರದಲ್ಲಿ ಪಬ್ ಜೀ ಸೇರಿ ಹಲವು ಚೀನಾದ ಆಪ್ಗಳನ್ನು ಬ್ಯಾನ್ ಮಾಡಿದ್ದ ಭಾರತ ಸರ್ಕಾರವು ಈಗ ಭಾರತದಲ್ಲಿ ಪಬ್ ಜೀ ರೀ ಲಾಂಚ್ಗೆ ಅನುಮತಿ ನೀಡಿದೆ. ಈ ಹಿನ್ನೆಲೆ ಶೀಘ್ರದಲ್ಲೇ ಈ ಆಪ್ ಲಾಂಚ್ ಆಗಲಿದೆ ಎಂದು ವರದಿಯಾಗಿದೆ.
ಇನ್ನು ಈ ವರದಿಗಳಿಗೆ ಪುಷ್ಠಿ ನೀಡಿರುವ ಪಬ್ಜೀ ಕಾಪೋರೇಷನ್, ಭಾರತದಲ್ಲಿ ತನ್ನ ಅಂಗ ಸಂಸ್ಥೆಯಲ್ಲಿ ಕೆಲಸ ಮಾಡಲು ಉದ್ಯೋಗಾವಕಾಶವನ್ನು ತೆರೆದು ಲಿಂಕ್ಡಿನ್ನಲ್ಲಿ ಆಫರ್ ಪ್ರಕಟಿಸಿದೆ. ಹೂಡಿಕೆ ಹಾಗೂ ವ್ಯೂಹ ರಚನೆ ವಿಶ್ಲೇಷಕರ ಹುದ್ದೆ ಇದೆ. ಹಾಗೆಯೇ ಪ್ರಾಡಕ್ಟ್ ಮ್ಯಾನೇಜರ್ ಹುದ್ದೆಯಿದೆ ಎಂದು ಲಿಂಕ್ಡಿನ್ನಲ್ಲಿ ಪ್ರಕಟಿಸಿರುವ ಪಬ್ಜೀ ಕಾರ್ಪೋರೇಷನ್, ಭಾರತದಲ್ಲಿ ಆರು ರೀತಿಯ ಹೊಸ ಹುದ್ದೆಗಳ ಪಟ್ಟಿ ಮಾಡಿದೆ.