ನವದೆಹಲಿ, ಏ.12 (DaijiworldNews/HR): ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ ಕಂಪನಿಯು ತನ್ನ ಲಾಜಿಸ್ಟಿಕ್ಸ್ ಮತ್ತು ಡೇಟಾ ಸೆಂಟರ್ನ ಸಾಮರ್ಥ್ಯಗಳನ್ನು ಹೆಚ್ಚಿಸಲು ಹಾಗೂ 2,500ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದಕ್ಕಾಗಿ ಅದಾನಿ ಸಮೂಹದೊಂದಿಗೆ ವಾಣಿಜ್ಯ ಪಾಲುದಾರಿಕೆಗೆ ಸಹಿ ಹಾಕಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಗ್ರಾಹಕರಿಗೆ ಸೇವೆಯನ್ನು ತ್ವರಿತವಾಗಿ ಪೂರೈಸುವ ಉದ್ದೇಶದಿಂದ ಅದಾನಿ ಲಾಜಿಸ್ಟಿಕ್ಸ್ ಲಿಮಿಟೆಡ್ನೊಂದಿಗೆ ಫ್ಲಿಪ್ಕಾರ್ಟ್ ಕೆಲಸ ಮಾಡಲಿದ್ದು, ಈ ಬಗ್ಗೆ ಫ್ಲಿಪ್ಕಾರ್ಟ್ ಹೇಳಿಕೆ ಬಿಡುಗಡೆ ಮಾಡಿದೆ.
ಅದಾನಿಕಾನೆಕ್ಸ್ನಲ್ಲಿ ಫ್ಲಿಪ್ಕಾರ್ಟ್ ತನ್ನ ಮೂರನೇ ಡೇಟಾ ಸೆಂಟರ್ ಅನ್ನು ಸಹ ನಿರ್ಮಿಸಲಿದ್ದು, 'ಅದಾನಿಕಾನೆಕ್ಸ್' ಎಡ್ಜ್ಕಾನೆಕ್ಸ್ ಮತ್ತು ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ನಡುವಿನ ಹೊಸ ಜಂಟಿ ಉದ್ಯಮವಾಗಿದೆ.
ಇನ್ನು ಅದಾನಿ ಲಾಜಿಸ್ಟಿಕ್ಸ್ ಲಿಮಿಟೆಡ್ ಮುಂಬೈನಲ್ಲಿ ಲಾಜಿಸ್ಟಿಕ್ಸ್ ಹಬ್ ಅನ್ನು ನಿರ್ಮಿಸುತ್ತಿದ್ದು, ಈ ಹಬ್ನಲ್ಲಿ ಅಂದಾನಿ ಸಂಸ್ಥೆಯು 5.34 ಲಕ್ಷ ಚದರ ಅಡಿಯ ಗೋದಾಮು ನಿರ್ಮಿಸಲಿದೆ ಎನ್ನಲಾಗಿದೆ.